ಫಿಲೋ ಸಿಂಚನ-ಯಕ್ಷ ಗಾಯನ ವೈಭವ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜಿನ ಪ್ರದರ್ಶನ ಕಲಾ ಸಂಘದ ಆಶ್ರಯದಲ್ಲಿ `ಫಿಲೋ ಸಿಂಚನ-ಯಕ್ಷ ಗಾಯನ ವೈಭವ’ ಕಾರ್ಯಕ್ರಮವು ಸೆ.16 ರಂದು ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನಡೆಯಲಿದೆ.

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಪ್ರಯೋಗಾಲಯ ಬೋಧಕರಾದ ಹರಿಪ್ರಸಾದ್ ಡಿ.ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ನಡೆಯುವ ಯಕ್ಷಗಾನ ವೈಭವದಲ್ಲಿ ಸತ್ಯನಾರಾಯಣ ಅಡಿಗರವರು ನಿರೂಪಣೆಯನ್ನು, ಪೆರ್ಲ ಸತೀಶ್ ಪುಣಿಚಿತ್ತಾಯ ಹಾಗೂ ಕು|ಪಾಣಾಜೆ ಅಮೃತ ಅಡಿಗರವರು ಭಾಗವತರಾಗಿ, ಚೆಂಡೆಯಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನೂಪ್ ಸ್ವರ್ಗ, ಮದ್ದಳೆಯಲ್ಲಿ ನೆಕ್ಕರೆಮಲೆ ಗಣೇಶ್ ಭಟ್, ಚಕ್ರತಾಳದಲ್ಲಿ ಮಾಸ್ಟರ್ ಸಮೃಧ್ ಪುಣಿಚಿತ್ತಾಯರವರು ನುಡಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.