ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಮತ್ತು ತಾಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್


ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್, ಟ್ವೆಕಾಂಡೋ ಟೂರ್ನಮೆಂಟ್ ಶ್ಮಿ ಜೆ.ಕೆ, ದರ್ಶನ್ ಎ.ಎಲ್ ರಾಜ್ಯಮಟ್ಟಕ್ಕೆ

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ತಲಪಾಡಿ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನ ಕಾಲೇಜಿನಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‍ನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ದ್ವಿತೀಯ ಪಿಸಿಎಂಬಿ`ಎ’ ವಿಭಾಗದ ವಿದ್ಯಾರ್ಥಿನಿ ರಶ್ಮಿ ಜೆ.ಕೆ, ದ್ವಿತೀಯ ಕಲಾ ವಿಭಾಗದ ಶಾಂತೇರಿ ಶೆಣೈ, ಪ್ರಥಮ ಪಿಸಿಎಂಬಿ`ಇ’ ವಿಭಾಗದ ಮರೀನ ಜೇನ್ ಮೊಂತೇರೋರವರು ಟೇಬಲ್ ಟೆನ್ನಿಸ್ ಟೂರ್ನಮೆಂಟ್‍ನಲ್ಲಿ ಭಾಗವಹಿಸಿದ್ದು, ಈ ಪೈಕಿ ರಶ್ಮಿ ಜೆ.ಕೆರವರು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟಿಗೆ ಆಯ್ಕೆಯಾಗಿರುತ್ತಾರೆ ಹಾಗೂ ಟ್ವೆಕಾಂಡೋ ಪಂದ್ಯದಲ್ಲಿ ಪ್ರಥಮ ಪಿಸಿಎಂಸಿ ವಿಭಾಗದ ದರ್ಶನ್ ಎ.ಎಲ್, ಮೌರ್ಯ ಸಿ.ಎಸ್‍ರವರು ಭಾಗವಹಿಸಿದ್ದು, ದರ್ಶನ್ ಎ.ಎಲ್‍ರವರು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಟೂರ್ನಮೆಂಟ್‍ಗೆ ಆಯ್ಕೆಯಾಗಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್ ಲೋಮಿನಾ ಪಿಯು ವಿನ್ನರ್ಸ್, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ವಿನ್ನರ್ಸ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ತಂಡದಲ್ಲಿ ವಿದ್ಯಾರ್ಥಿಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಸುಜಿತ್ ಎಸ್‍ಪಿ, ವಿದ್ವಾನ್ ಕೆ.ಪಿ, ಗೌರವ್ ಎಸ್.ಪವಾರ್, ಮೊಹಮ್ಮದ್ ಝಾಯಿದ್, ದ್ವಿತೀಯ ವಿಜ್ಞಾನ ವಿಭಾಗದ ಯತೀಶ್ ಕುಮಾರ್, ಪ್ರಥಮ ವಾಣಿಜ್ಯ ವಿಭಾಗದ ಅಬ್ದುಲ್ ಖಾದರ್, ಮೊಹಮ್ಮದ್ ಸೈಫು ಸೈಲ್, ಸುಧೀಂದ್ರ, ಮೊಹಮ್ಮದ್ ಬಾದಿರ್, ಮೊಹಮ್ಮದ್ ರಾಹಿಲ್, ಮೊಹಮ್ಮದ್ ಸಫಾಜ್, ಪ್ರಥಮ ಕಲಾ ವಿಭಾಗದ ಹರ್ಷಿತ್ ಎ, ಪ್ರಥಮ ವಿಜ್ಞಾನ ವಿಭಾಗದ ಅಫ್ರೀಜ್ ಇಬ್ರಾಹಿಂರವರು ಭಾಗವಹಿಸಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಕ್ಸ್
ಇದೇ ಮಾರ್ಚ್ 16 ರಂದು ಉಜಿರೆ ಎಸ್‍ಡಿಂಎ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಕಾಲೇಜು ತಂಡ ಅರ್ಹತೆ ಗಳಿಸಿರುತ್ತದೆ.