‘ಪರೀಕ್ಷಾ ತಯಾರಿ’ ಉಪನ್ಯಾಸ ಕಾರ್ಯಕ್ರಮ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂಖ್ಯಾ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೆ. 18 ರಂದು ಪರೀಕ್ಷೆ ತಯಾರಿ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಕಾಸ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರವಿಭಾಗದ ಉಪನ್ಯಾಸಕರಾದ ಕಾರ್ತಿಕ್ ಉಪರ್ಣ ಅವರು ಮಾತನಾಡಿ ಸೋಲೆ ಗೆಲುವಿನ ಸೋಪಾನ, ಆತ್ಮವಿಶ್ವಾಸ, ಇಚ್ಚಾಶಕ್ತಿಯಿಂದ ಪ್ರಯತ್ನಿಸಿದರೆ ಯಶಸ್ಸು ಶತಸಿದ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಗೆಲುವು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಸ್ವಯಂ ನಿಯಂತ್ರಣ, ಧ್ವನಿನಿದ್ದೆ, ವ್ಯಾಯಮ, ಧ್ಯಾನ ಇವುಗಳನ್ನು ಅಡವಳಿಸಿಕೊಂಡಾಗ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ವಿಜಯ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಪಡೆಯಲು ಸರಿಯಾದ ಯೋಜನೆಗಳನ್ನ್ನು ಹಾಕಿಕೊಳ್ಳಬೇಕು ನಿರಂತರ ಪ್ರಯತ್ನದಿಂದ ಮತ್ರ ಗೆಲುವು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಯೋಜಕರಾದ ಭರತ್ ಜಿ ಪೈ ಮತ್ತು ಶ್ರುತಿ ಉಪಸ್ಥಿತರಿದ್ದರು.

ಶ್ರೀ ದೇವಿ ಬಳಗ ಪ್ರಾರ್ಥಿಸಿ, ಸಂಯೋಜಕರಾದ ಭರತ್ ಜಿ ಪೈ ಸ್ವಾಗತಿಸಿ, ಫಾತಿಮತ್ ಸಾನಿದಾ ವಂಡಿಸಿದರು. ಶಾರಲ್ ಶೆಲ್ಮಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.