ಶಿಕ್ಷಕರ ದಿನಾಚರಣೆ

ಶಿಕ್ಷಕ ವೃತ್ತಿ ಎಂಬುದು ಸಮಾಜ ಗೌರವಿಸುವ ವೃತ್ತಿಯಾಗಿದೆ. ಆದ್ದರಿಂದ ಶಿಕ್ಷಕ ವೃತ್ತಿಗೆ ಸಿಗುವ ಗೌರವ ಇತರ ವೃತ್ತಿಗೆ ಸಿಗಲಾರದು ಎಂದು ಸಂತ ಫಿಲೋಮಿನಾ ಕಾಲೇಜ್ನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟುರವರು ಹೆಳಿದರು.

ಡಾ|ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನೋತ್ಸವದ ಅಂಗವಾಗಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ನಲ್ಲಿ ಕಾಲೇಜ್ನ ವಿದ್ಯಾರ್ಥಿ ಸಂಘದ ವತಿಯಿಂದ ಸೆ.5 ರಂದು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಣ ಕಲಿಸಿದ ಗುರುವನ್ನು ಮತ್ತು ಹೆತ್ತ ತಂದೆ-ತಾಯಿಯನ್ನು ಯಾರು ಗೌರವಿಸುವುದಿಲ್ಲವೋ ಅವರು ಅಹಂಕಾರಿ ಸ್ವಭಾವದವರಾಗಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ತಪ್ಪನ್ನು ಮಾಡಿದಾಗ ಆ ತಪ್ಪನ್ನು ತಿದ್ದಿ ತೀಡುವ ಮೂಲಕ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವಂತಹ ಅಪೂರ್ವವಾದ ಕೈಂಕರ್ಯವನ್ನು ಶಿಕ್ಷಕರು ನಿರ್ವಹಿಸುತ್ತಾರೆ. ಹಿಂದೆ ಗುರುಕುಲದ ಮೂಲಕ ಮತ್ತು ಇಂದು ಶಾಲಾ-ಕಾಲೇಜುಗಳ ಮೂಲಕ ಮಕ್ಕಳಿಗೆ ವಿದ್ಯೆ ಲಭಿಸುತ್ತದೆ. ಪಠ್ಯ ಪುಸ್ತಕದಲ್ಲಿನ ವಿಷಯದ ಕುರಿತು ಅಲ್ಲದೆ ಮೌಲ್ಯಗಳನ್ನು ಬೋಧಿಸುವ ಮೂಲಕ ಶಿಕ್ಷಕರು ಸಮಾಜದ ಆದರ್ಶರೆನಿಸಿಕೊಂಡಿದ್ದಾರೆ. ಆದ್ದರಿಂದ ಶಿಕ್ಷಕರನ್ನು ನಾವು ಗೌರವದಿಂದ ಕಾಣುವುದು ಪ್ರತಿಯೊಬ್ಬ ಪ್ರಜ್ಞಾವಂತ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜ್ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಶಿಕ್ಷಕರಲ್ಲಿ ಬದ್ಧತೆ ಇರಬೇಕಾಗಿರುವುದು ಅತ್ಯಗತ್ಯ. ಶಿಕ್ಷಕರು ಯಾವಾಗಲೂ ಶಿಕ್ಷಕರೇ. ಶಿಕ್ಷಕರು ವೃತ್ತಿಯಿಂದ ನಿವೃತ್ತರಾದರೂ ಅವರನ್ನು ಗುರುತಿಸುವುದು ಶಿಕ್ಷಕ ಎಂಬ ನೆಲೆಯಲ್ಲಿ. ಶಿಕ್ಷಕರು ಮಕ್ಕಳನ್ನು ಕೇರ್ ತೆಗೆದುಕೊಳ್ಳುವುದು ಅಲ್ಲದೆ ಒಮ್ಮೊಮ್ಮೆ ಅವರು ಕೌನ್ಸಿಲಿಂಗ್ ವೃತ್ತಿಯನ್ನು ಜೊತೆಯಾಗಿ ಮಾಡುವ ಮೂಲಕ ಮಕ್ಕಳ ಮನಸ್ಸನ್ನು ಅರ್ಥೈಸಿಕೊಳ್ಳುವಲ್ಲಿ ಸಫಲರೆನಿಸಿಕೊಂಡಿದ್ದಾರೆ. ಶಿಕ್ಷಕರು ತಮ್ಮ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬೇಕಾದುದು ಮತ್ತು ಜ್ಞಾನಶಕ್ತಿಯನ್ನು ವೃದ್ಧಿಸಿಕೊಂಡಾಗ ಶಿಕ್ಷಕನ ವ್ಯಕ್ತಿತ್ವ ಹಾಗೂ ಸಾಮಥ್ರ್ಯ ಬೆಳಕಿಗೆ ಬರುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳೇ ನೇತೃತ್ವ ವಹಿಸಿದ್ದರು:
ಇಡೀ ವರ್ಷದಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಸೂಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುವುದು ನಿಜ. ಆದರೆ ಶಿಕ್ಷಕರ ದಿನಾಚರಣೆ ದಿನದಂದು ಶಿಕ್ಷಕರನ್ನು ಹಾಗೂ ಆಡಳಿತ ಸಿಬ್ಬಂದಿಯನ್ನು ಒಂದೆಡೆ ಸೇರಿಸಿ, ಅವರಿಗೆ ಕೆಲವೊಂದು ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿ ಶಿಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸುವುದು ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಹೆಗ್ಗಳಿಕೆಯಾಗಿದೆ. ಅದರಂತೆ ಪುರುಷ ಹಾಗೂ ಮಹಿಳಾ ಉಪನ್ಯಾಸಕರಿಗೆ ಮತ್ತು ಆಡಳಿತ ಸಿಬ್ಬಂದಿ ವರ್ಗದವರಿಗೆ ಕಾಲೇಜ್ನ ವಿದ್ಯಾರ್ಥಿ ಸಂಘದವರು