ಜಿಲ್ಲಾ ಮಟ್ಟದ ಈಜು ಸ್ಪರ್ಧೆ:ಫಿಲೋಮಿನಾ ಪಿಯು ಬಾಲಕಿಯರ ತಂಡ ವಿನ್ನರ್ಸ್, ನೀಲ್ ವೈಯಕ್ತಿಕ ಚಾಂಪಿಯನ್

ಪುತ್ತೂರು: ಅಂಬಿಕಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪರ್ಲಡ್ಕ ಬಾಲವನ ಈಜುಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್ ಎನಿಸಿಕೊಂಡಿದೆ.

ಬಾಲಕಿಯರ ವಿಭಾಗದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಧನ್ವಿ ಜೆ.ರೈರವರು 100ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿ, 200ಮೀ. ವೈಯಕ್ತಿಕ ಮೆಡ್ಲೇಯಲ್ಲಿ ಚಿನ್ನ, 4*100ಮೀ. ಫ್ರೀ ಸ್ಟೈಲ್ ರಿಲೇ ಹಾಗೂ 100ಮೀ. ಫ್ರೀ ಸ್ಟೈಲ್‍ನಲ್ಲಿ ಚಿನ್ನದ ಪದಕ, ಪ್ರಥಮ ವಾಣಿಜ್ಯ ವಿಭಾಗದ ಶಾಂತೇರಿ ಶಣೈಯವರು 50ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿ, 100ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ಕಂಚು, 4*100ಮೀ ಮೆಡ್ಲೇ ರಿಲೇ ಹಗೂ 4*100ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕ, ದ್ವಿತೀಯ ವಿಜ್ಞಾನ ವಿಭಾಗದ ವಾಸವಿ ರೈಯವರು 50ಮೀ. ಹಾಗೂ 100ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ಚಿನ್ನ, 50ಮೀ. ಫ್ರೀ ಸ್ಟೈಲ್‍ನಲ್ಲಿ ಬೆಳ್ಳಿ, ಪ್ರಥಮ ವಿಜ್ಞಾನ ವಿಭಾಗದ ಅನನ್ಯ ಕೆ.ಎಸ್‍ರವರು 4*100 ಮೆಡ್ಲೆ ಹಾಗೂ ಫ್ರೀ ಸ್ಟೈಲ್ ರಿಲೇಯಲ್ಲಿ ಚಿನ್ನ, 100ಮೀ. ಬ್ಯಾಕ್ ಸ್ಟ್ರೋಕ್‍ನಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.

ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನೀಲ್ ಮಸ್ಕರೇನ್ಹಸ್‍ರವರು 100ಮೀ. ಬ್ರೆಸ್ಟ್ ಸ್ಟ್ರೋಕ್, 200ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಚಿನ್ನ, 200ಮೀ. ವೈಯಕ್ತಿಕ ಮೆಡ್ಲೇಯಲ್ಲಿ ಚಿನ್ನ, 4*100 ಮೆಡ್ಲೆ ರಿಲೇಯಲ್ಲಿ ಚಿನ್ನ, 4*100 ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿದ್ದು, ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಪ್ರಥಮ ವಿಜ್ಞಾನ ವಿಭಾಗದ ಅಂಕಿತ್ ಗೌಡರವರು 100ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿ, 50ಮೀ., 100ಮೀ. ಬ್ರೆಸ್ಟ್ ಸ್ಟ್ರೋಕ್ ಹಾಗೂ 4*100ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನ, 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ, ಪ್ರಥಮ ವಿಜ್ಞಾನ ವಿಭಾಗದ ಸಾತ್ವಿಕ್‍ರವರು 50ಮೀ. ಬ್ರೆಸ್ಟ್ ಸ್ಟ್ರೋಕ್, 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ, 100ಮೀ ಫ್ರೀಸ್ಟೈಲ್, 200ಮೀ. ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಕಂಚು, 4*100ಮೀ. ಮೆಡ್ಲೇ ರಿಲೇಯಲ್ಲಿ ಚಿನ್ನ ಪದಕ, ಪ್ರಥಮ ವಾಣಿಜ್ಯ ವಿಭಾಗದ ತನ್ವೀರ್ ಪಿಂಟೋರವರು 150ಮೀ. ಫ್ರೀ ಸ್ಟೈಲ್, 100ಮೀ. ಬ್ಯಾಕ್ ಸ್ಟ್ರೋಕ್, 4*100ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ, 4*100ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನ, 50ಮೀ. ಬಟರ್‍ಫ್ಲೈಯಲ್ಲಿ ಕಂಚಿನ ಪದಕ ಪಡೆದುಕೊಂಡಿರುತ್ತಾರೆ.

ಇವರುಗಳಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಶಿ, ನಿರೂಪ್ ಜಿ.ಆರ್, ರೋಹಿತ್ ಪ್ರಕಾಶ್, ದೀಕ್ಷಿತ್, ವಸಂತ್ ಕುಮಾರ್, ಸೀತಾರಾಮ್‍ರವರು ತರಬೇತಿ ನೀಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಕ್ಸ್
ನಾಲ್ವರು ರಾಜ್ಯ ಮಟ್ಟಕ್ಕೆ ಆಯ್ಕೆ..

ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಈಜು ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆಗೈದ ಈಜುಪಟುಗಳಾದ ಬಾಲಕರ ವಿಭಾಗದಲ್ಲಿ ನೀಲ್ ಮಸ್ಕರೇನ್ಹಸ್, ಅಂಕಿತ್ ಗೌಡ ಹಾಗೂ ಬಾಲಕಿಯರ ವಿಭಾಗದಲ್ಲಿ ಧನ್ವಿ ಜೆ.ರೈ, ವಾಸವಿ ರೈಯವರು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ತೇರ್ಗಡೆ ಹೊಂದಿರುತ್ತಾರೆ. ರಾಜ್ಯ ಮಟ್ಟದ ಈಜು ಸ್ಪರ್ಧೆಯು ಬೆಂಗಳೂರು ನಾರ್ತ್‍ನಲ್ಲಿ ಜರಗಲಿದೆ.