ರಾಜ್ಯಮಟ್ಟದ ಈಜು ಸ್ಪರ್ಧೆ-2018

ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಈಜು ಸ್ಪರ್ಧೆ-2018 ಇದರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ತ್ರಿಶೂಲ್ ಹಾಗೂ ಸಿಂಚನಾ ಡಿ.ಗೌಡರವರು ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ದ್ವಿತೀಯ ವಾಣಿಜ್ಯ ವಿಭಾಗದ ತ್ರಿಶೂಲ್ ಗೌಡರವರು 400ಮೀ. ವೈಯಕ್ತಿಕ ಮೆಡ್ಲೆ, 400ಮೀ. ಫ್ರೀ ಸ್ಟೈಲ್ ಹಾಗೂ 4*400ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಮತ್ತು 4*400ಮೀ. ಮೆಡ್ಲೆ ರಿಲೇಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ. ದ್ವಿತೀಯ ವಾಣಿಜ್ಯ ವಿಭಾಗದ ಸಿಂಚನಾ ಡಿ.ಗೌಡರವರು 100ಮೀ. ಬಟರ್‍ಫ್ಲೈಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಗಳಿಸಿದ್ದಾರೆ. ಇವರೀರ್ವರೂ ಪುತ್ತೂರು ಡಾ|ಸಿವರಾಮ ಕಾರಂತ ಬಾಲವನದಲ್ಲಿನ ಅಕ್ವೆಟಿಕ್ ಕ್ಲಬ್‍ನ ಸದಸ್ಯರಾಗಿದ್ದು, ಬಾಲವನ ಈಜುಕೊಳದ ಪಾರ್ಥ ವಾರಣಾಶಿ, ನಿರೂಪ್ ಜಿ.ಆರ್, ವಸಂತ ಕುಮಾರ್, ರೋಹಿತ್ ಪಿ.ರವರು ತರಬೇತಿ ನೀಡುತ್ತಿದ್ದಾರೆ ಎಂದು ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.