ವಿದ್ಯಾರ್ಥಿ ಸಂಘ ಉದ್ಘಾಟನೆ

ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತುಗಾರಿಕೆ, ಸ್ವಯಂ ಪ್ರೇರೇಪಣಾಶಕ್ತಿಯ ಜೊತೆಗೆ ಕಠೀನ ಪರಿಶ್ರಮವನ್ನು ಮೈಗೂಡಿಸಿಕೊಂಡಾಗ ಜೀವನ ಫಲಪ್ರದವಾಗುತ್ತದೆ. ಸಣ್ಣ ಸಣ್ಣ ವಿಷಯದಲ್ಲಿ ಜೀವನದಲ್ಲಿ ವೈಫಲ್ಯತೆ ಉಂಟಾದಾಗ ನಿರಾಶಾಗಾರಿ ಜೀವನವನ್ನು ಕೊನೆಗಳಿಸುವುದನ್ನು ಬಿಟ್ಟು ಬದುಕಿನಲ್ಲಿನ ವೈಫಲ್ಯತೆಯನ್ನು ಚ್ಯಾಲೆಂಜಾಗಿ ಸ್ವೀಕರಿಸಿ ಮುನ್ನೆಡೆದಾಗ ಯಶಸ್ವಿ ಜೀವನ ನಮ್ಮದಾಗುತ್ತದೆ ಎಂದು ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಪ್ರೀತಂ ಫಿಲಿಪ್ ತಾವ್ರೋರವರು ಹೇಳಿದರು.

ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮವು ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜೂ.15 ರಂದು ಬೆಳಿಗ್ಗೆ ಜರಗಿದ ಸಂದರ್ಭದಲ್ಲಿ ನೂತನ ವಿದ್ಯಾರ್ಥಿ ಸಂಘವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪ್ರತಿಯೋರ್ವ ವಿದ್ಯಾರ್ಥಿಗೆ ಪ್ರಾಥಮಿಕ ಶಿಕ್ಷಣವು ನಿಜವಾಗಿ ಭದ್ರ ಬುನಾದಿಯಾಗಿರುತ್ತದೆ. ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಪೂರೈಸಿ ಕಾಲೇಜು ಮೆಟ್ಟಿಲನ್ನು ಹತ್ತಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮಗೆ ಭದ್ರ ಬುನಾದಿಯಿತ್ತ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಬೇಡಿ. ಕನ್ನಡ ಮಾಧ್ಯಮದಿಂದ ಬಂದವನಾದ ನಾನು ಇಂದು ಓರ್ವ ವೈದ್ಯನ್ಯಾಗಿದ್ದೇನೆಂದೆರೆ ನಾನು ಪಟ್ಟ ಕಠಿಣ ಪರಿಶ್ರಮವಾಗಿದೆ. ಕಠಿಣ ಪರಿಶ್ರಮ ಮಾಡದವರು ಎಂದಿಗೂ ಸಾಧಕರಾಗಲು ಸಾಧ್ಯವಿಲ್ಲ ಎಂದ ಅವರು ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತಮ ತಯಾರಿ ಮಾಡುವ ಮೂಲಕ ಮತ್ತು ಉಪನ್ಯಾಸಕರ ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನೆಡೆದಾಗ ಜೀವನವು ಯಶಸ್ವಿಯಾಗುವುದಲ್ಲದೆ ಜೀವನವನ್ನು ಸಮತೋಲನದಲ್ಲಿ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಫಿಲೋಮಿನಾ ವಿದ್ಯಾಸಂಸ್ಥೆ ಅನೇಕ ಮಹನೀಯರನ್ನು ಹುಟ್ಟುಹಾಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಭಾಗದಲ್ಲಿ ಗಮನಾರ್ಹ ಪ್ರತಿಭೆಯನ್ನು ತೋರಿ ಸಂಸ್ಥೆಗೆ ಹೆಸರು ತರುವಂತಾಗಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‍ನ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ವಿದ್ಯಾರ್ಥಿ ಜೀವನವು ನಿಜಕ್ಕೂ ಉಲ್ಲಾಸದಾಯಕವಾಗಿದೆ. ಮಾನವೀಯ ಮೌಲ್ಯಗಳ ಜೊತೆಗೆ ತಾನು ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎನ್ನುವ ಪ್ರೇರೇಪಣೆಯೊಂದಿಗೆ ಜೀವನವನ್ನು ಧೈರ್ಯದಿಂದ ಎದುರಿಸಬಲ್ಲೆ ಎನ್ನುವ ಕಾಳಜಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗಿದೆ. ದೇವರು ಮಾನವನಿಗೆ ಈ ಭೂಮಿಯಲ್ಲಿ ಸ್ವತಂತ್ರವಾಗಿ ಜೀವಿಸಲು ಒಂದು ಅಪೂರ್ವ ಅವಕಾಸವನ್ನು ಕಲ್ಪಿಸಿದ್ದಾನೆ. ಮಾನವನು ಇದನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸಿಕೊಂಡು ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸುವಂತಾಗಬೇಕು ಎಂದ ಅವರು ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಸಾಧನೆ ಒಮ್ಮೆಲೆ ಒಲಿಯಲು ಸಾಧ್ಯವಿಲ್ಲ. ನಿರಂತರ ಪ್ರಯತ್ನ ಮಾಡಿದಾಗ ಸಾಧನೆ ಒಲಿಯಬಹುದು ಎಂದು ಅವರು ಹೇಳಿದರು.

ಮುಖ್ಯ ಅತಿಥಿ, ಕಾಲೇಜ್‍ನ ಕ್ಯಾಂಪಸ್ ಇನ್-ಚಾರ್ಜ್ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯನ್ನು ದೂಷಿಸದೆ ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಬೇಕಾಗಿದೆ. ಯಾಕೆಂದರೆ ಸಂಸ್ಥೆಯ ಅಭಿವೃದ್ಧಿ ಹಾಗೂ ಹಿನ್ನೆಡೆಯಲ್ಲಿ ಪ್ರತಿಯೋರ್ವ ಕಲಿತ ವಿದ್ಯಾರ್ಥಿಯು ಜವಾಬ್ದಾರನೇ ಎಂಬುದಾಗಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ವಿದ್ಯಾಸಂಸ್ಥೆಯ ಅಭಿವೃದ್ಧಿ ಹಾಗೂ ಇಮೇಜನ್ನು ಹೆಚ್ಚಿಸಲು ಪ್ರತಿಯೋರ್ವ ವಿದ್ಯಾರ್ಥಿಯೂ ಗರಿಷ್ಟ ಪ್ರಮಾಣದಲ್ಲಿ ಪ್ರಯತ್ನಿಸಬೇಕಾಗಿದೆ ಎಂದ ಅವರು ಫಿಲೋಮಿನಾ ಪಿಯು ಕಾಲೇಜು ಶಿಸ್ತುಭರಿತವಾದ ಸಂಸ್ಥೆ ಎನ್ನುವುದಕ್ಕೆ ಇಂದಿಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಯೇ ಸಾಕ್ಷಿಯಾಗಿದೆ. ಪ್ರಾಂಶುಪಾಲ ವಂ|ವಿಜಯ್ ಲೋಬೋರವರ ಸಮಗ್ರ ಮಾರ್ಗದರ್ಶನದಲ್ಲಿ ಪಿಯು ವಿದ್ಯಾಸಂಸ್ಥೆ ಶಿಸ್ತುಭರಿತವಾಗಿ ಮುನ್ನೆಡೆಯುತ್ತಿದೆ ಎಂದು ಅವರು ಹೇಳಿದರು.

ಕಾಲೇಜ್‍ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ನೂತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸತ್ಯಾತ್ಮ ಭಟ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಹೆಸರನ್ನು ವಿದ್ಯಾರ್ಥಿನಿ ರಕ್ಷಾ ಅಂಚನ್ ಓದಿದರು. ಕಾಲೇಜ್‍ನ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೋಭಿತ್ ರೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಕ್ಯಾಲಿನ್ ಡಿ’ಸೋಜ ವಂದಿಸಿದರು. ವಿದ್ಯಾರ್ಥಿನಿ ರಿಯನ್ನಾ ಜೇನ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಮಾಯಿದೆ ದೇವುಸ್ ಚರ್ಚ್‍ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ

ಬಾಕ್ಸ್
ಡಿ.ವಿ, ಶೋಭಾ, ನ ಬಾಕ್ಸ್ ಳಿನ್ ನಮ್ಮೀ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳು…

ಪ್ರತಿಯೋರ್ವ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಒಳ್ಳೆಯ ಉದ್ಧೇಶವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಭವಿಷ್ಯದಲ್ಲಿ ತಾನು ಏನಾಗಬಲ್ಲೆ ಎಂದು ಈಗಲೇ ನಮ್ಮಲ್ಲಿ ಸ್ಪಷ್ಟ ಗುರಿ ಹಾಗೂ ಉದ್ಧೇಶವಿರದಿದ್ದರೆ ಜೀವನ ನಶ್ವರವಾದೀತು. ಭಗವಂತ ಈ ಭೂಮಿಯಲ್ಲಿ ಜೀವಿಸಲು ಮಾನವನಿಗೆ ಉತ್ತಮ ಅವಕಾಶವನ್ನು ನೀಡಿದ್ದಾನೆ. ಅದರ ಸದ್ವಿನಿಯೋಗವಾಗಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಸಂದರ್ಭದಲ್ಲಿ ಯಾವುದೇ ನಕರಾತ್ಮಕ ವಿಷಯಗಳಿಗೆ ಮನ ಮಾಡದೆ ಧನಾತ್ಮಕ ವಿಷಯಗಳತ್ತ ಚಿಂತನೆ ಮಾಡುತ್ತಾ ಜ್ಞಾನವನ್ನು ಸಂಪಾದಿಸುವಂತಾಗಬೇಕು. ಕಳೆದ ಲೋಕಸಭೆಯ ಚುನಾವಣೆಯಲ್ಲಿ ಗೆಲುವು ಕಂಡಿರುವ ಡಿ.ವಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್ ಆಗಿರುವ ಬೋಪಣ್ಣರವರು ಫಿಲೋಮಿನಾ ವಿದ್ಯಾಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳೆಂದು ಹೇಳಲು ಹೆಮ್ಮೆ ಎನಿಸುತ್ತದೆ.
ಪ್ರೊ|ಲಿಯೋ ನೊರೋನ್ಹಾ, ಪ್ರಾಂಶುಪಾಲರು, ಫಿಲೋಮಿನಾ ಪದವಿ ಕಾಲೇಜು