ಸಂಖ್ಯಾಶಾಸ್ತ್ರ ದಿನಾಚರಣೆ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಆಶ್ರಯದಲ್ಲಿ ದಿ.29/06/2018 ರಂದು ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯ ಅಂಗವಾಗಿ ಫ್ರೊ. ಪಿ.ಸಿ. ಮಹಲನೋಬಿಸ್ ಇವರ 125ನೇ ಜನ್ಮಶತಾಬ್ದಿಯನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಫಾ| ವಿಜಯ್ ಲೋಬೊರವರು ಮಾತನಾಡಿ, ಸಂಖ್ಯಾ ಶಾಸ್ತ್ರದ ಬಳಕೆಯನ್ನು ದತ್ತಾಂಶವನ್ನು ಸಂಗ್ರಹಿಸಲು, ಸರ್ವೆ ನಡೆಸಲು ಜನಗಣತಿ ಹೀಗೆ ಹಲವಾರು ಕಡೆಗಳಲ್ಲಿ ಬಳಸಲಾಗುತ್ತಿದೆ. ಪ್ರಸ್ತುತ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರವನ್ನು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಕಲಿಸಲಾಗುತ್ತದೆ. ಸಂಖ್ಯಾಶಾಸ್ತ್ರವನ್ನು ದೈನಂದಿನ ಜೀವನದಲ್ಲಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತಾ, ಸಂಖ್ಯಾಶಾಸ್ತ್ರದ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಶರಲ್ ಶೆಲ್ಮಾ ಡಿಸೋಜ, ಸಾತ್ವಿಕ ಇವರು ಸಂಖ್ಯಾಶಾಸ್ತ್ರದ ಮಹತ್ವ, ಆಡಳಿತಾತ್ಮಕ ಅಂಕಿ ಆಂಶಗಳ ಬಗ್ಗೆ ಪಬಂಧ ಮಂಡಿಸಿದರು.

ವೇದಿಕೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಭರತ್ ಜಿ.ಪೈ, ಶ್ರುತಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶರಲ್ ಶೆಲ್ಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ವೇಣುಗೋಪಾಲ್ ವಂದಿಸಿದರು.