‘ಪತಿಭಾ ದಿನ’ ಆಚರಣೆ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಜ್ರ ಮಹೋತ್ಸವದ ಆಚರಣೆಯ ಅಂಗವಾಗಿ ನವೆಂಬರ್ 12 ರಂದು ಕಾಲೇಜು ವಿದ್ಯಾರ್ಥಿಗಳ ‘ಪತಿಭಾ ದಿನ’ ಸ್ಪರ್ಧೆಯು ಕಾಲೇಜು ರಜತ ಮಹೋತ್ಸವ ಸಭಾಭವನದಲ್ಲಿ ಪೂರ್ವಾಹ್ನ 9 ಗಂಟೆಗೆ ಜರುಗಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ಜೂನಿಯರ್ ಶಂಕರ್ ವಹಿಸಲಿದ್ದು ಅಧ್ಯಕ್ಷತೆಯನ್ನು ಕಾಲೆಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ವಹಿಸಲಿದ್ದಾರೆ. ತೀರ್ಪುಗಾರರಾಗಿ ವಿವೇಕಾನಂದ ಪದವಿ ಕಾಲೇಜಿನ ಆಂಗ್ಲ ವಿಭಾಗದ ವಿದ್ವಾನ್ ಬಾಲಕೃಷ್ಣ ಹೊಸಮನೆ, ವಿದುಷಿ ಪೂಜಾ ಪೂಜಾ ಪ್ರಶಾಂತ್ ಹಾಗೂ ವಿದುಷಿ ಮೇಘಾ ದೇವಾಡಿಗ ನಿರ್ವಹಿಸಲಿದ್ದು, ಕಾಲೇಜಿನ ಒಟ್ಟು 17 ವಿಭಾಗಗಳೂ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಜೊತೆಗೆ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಹಿತಿಕ, ಸಾಂಸ್ಕ್ರತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆಯಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.