ಫಿಲೋಮಿನಾದಲ್ಲಿ ಸಾ೦ಸ್ಕೃತಿಕ ಸ್ಪರ್ಧೆ `ಫಿಲೋ ಫ್ಲೇರ್’

ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ಷಂಪ್ರತಿ ಅಂತರ್-ತರಗತಿ `ಟ್ಯಾಲೆಂಟ್ಸ್ ಡೇ’ ಹೆಸರಿನಲ್ಲಿ ಥೀಮ್ ಓರಿಯೆಂಟೆಡ್ ಮನರಂಜನಾ ಕಾರ್ಯಕ್ರಮವನ್ನು ಕಾಲೇಜಿನ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಬಾರಿ `ಫಿಲೋ ಫ್ಲೇರ್’ ನಾಮಾಂಕಿತದಲ್ಲಿ ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ನ.5 ರಂದು ಜರಗಿತು.

ಒಟ್ಟು 17 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ದ್ವಿತೀಯ ಪಿಸಿಎಂಬಿ`ಎ’ ವಿಭಾಗ ಚಾಂಪಿಯನ್ ಎನಿಸಿಕೊಂಡಿದ್ದು, ದ್ವಿತೀಯ ಎಸ್‍ಇಬಿಎ`ಬಿ’ ವಿಭಾಗವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ ಎಸ್‍ಸಿಬಿಎ ಹಾಗೂ ಪ್ರಥಮ ಇಸಿಬಿಎ ವಿಭಾಗವು ಜಂಟಿಯಾಗಿ ಮೂರನೇ ಸ್ಥಾನಿಯಾಗಿ ಗುರುತಿಸಲ್ಪಟ್ಟಿತು. ಚಾಂಪಿಯನ್ ಎನಿಸಿಕೊಂಡ ತಂಡವು ಪರಿಸರ ಮುನಿಸಿಕೊಂಡರೆ ಏನಾದೀತು ಎಂಬ ಬಗೆಗಿನ `ಪರಿಸರ ಉಳಿಸಿ’ ಎಂಬಂತೆ ಪ್ರದರ್ಶನಗೊಂಡರೆ, ರನ್ನರ್ಸ್ ಪ್ರಶಸ್ತಿ ವಿಜೇತ ತಂಡವು ಪ್ರವಾಹ ದುರಂತದಿಂದ ಆಗುವ ಪರಿಣಾಮಗಳು ಹಾಗೂ ಅದನ್ನು ಹೇಗೆ ತಡೆಗಟ್ಟುವುದು ಇದರ ಬಗೆಗಿನ ಪ್ರದರ್ಶನ ನೀಡಿದರು. ಜಂಟಿಯಾಗಿ ಮೂರನೇ ಸ್ಥಾನ ಪಡೆದ ದ್ವಿತೀಯ ಎಸ್‍ಸಿಬಿಎ ತಂಡವು ಭಾರತ ಸಂಸ್ಕೃತಿ ಹಾಗೂ ಸೇನೆ ಕುರಿತು ಹಾಗೂ ಪ್ರಥಮ ಇಸಿಬಿಎ ವಿಭಾಗವು ಕರ್ನಾಟಕ ಸಂಸ್ಕೃತಿ ಹಾಗೂ ತಾಯಿ ಕುರಿತು ಪ್ರದರ್ಶನ ನೀಡಿದವು.

ತೀರ್ಪುಗಾರರಾಗಿ ಪ್ರವೀಣ್ ವರ್ಣಕುಟೀರ, ವಿದುಷಿ ಪ್ರತೀಕ್ಷ ಆಚಾರ್ಯ, ವಿದುಷಿ ವಸುಧಾರವರು ಸಹಕರಿಸಿದರು. ಲಲಿತಾ ಕಲಾ ಸಂಘದ ಸಂಯೋಜಕಿ ಡಾ|ಆಶಾ ಸಾವಿತ್ರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಸಾ೦ಸ್ಕೃತಿಕ ಕ್ಷೇತ್ರದಲ್ಲಿನ ಪ್ರತಿಭೆಯನ್ನು ಹೊರಗೆಡುವಲ್ಲಿ ಸಂಸ್ಥೆಯು ಉತ್ತಮ ಅವಕಾಶವನ್ನು ಕಲ್ಪಿಸಿದೆ ಮಾತ್ರವಲ್ಲ ವಿದ್ಯಾರ್ಥಿಗಳೂ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದೂ ಕೂಡ ಸಂತೋಷದ ವಿಷಯವಾಗಿದೆ. ಕಾಲೇಜ್‍ನ ಲಲಿತಾ ಕಲಾ ಸಂಘದವರು ವರ್ಷಂಪ್ರತಿ ಈ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಬಹಳ ಖುಶಿ ಕೊಟ್ಟಿದೆ.

-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಫಿಲೋಮಿನಾ ಪಿಯು ಕಾಲೇಜು