ವಿದ್ಯಾರ್ಥಿಗಳ ಸಾ೦ಸ್ಕೃತಿಕ ವೈಭವ ‘ಫಿಲೋ ಫ್ಲೇರ್’ ಸ್ಪರ್ಧೆಯು ನವಂಬರ್ 5 ರಂದು ಜರುಗಲಿದೆ

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ನವಂಬರ್ 5 ರಂದು ಕಾಲೇಜು ವಿದ್ಯಾರ್ಥಿಗಳ ಸಾ೦ಸ್ಕೃತಿಕ ವೈಭವ ‘ಫಿಲೋ ಫ್ಲೇರ್’ ಸ್ಪರ್ಧೆಯು ಕಾಲೇಜು ರಜತ ಮಹೋತ್ಸವ ಸಭಾಭವನದಲ್ಲಿ ಪೂರ್ವಾಹ್ನ 9 ಗ೦ಟೆಗೆ ಜರುಗಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನಡ ಚಲನಚಿತ್ರ ಮಂಡಳಿಯ ರಂಗಭೂಮಿ ಕಲಾವಿದ ಶ್ರೀರಾಮ್ ವಹಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ವಹಿಸಲಿದ್ದಾರೆ. ಕಾಲೇಜಿನ ಒಟ್ಟು 17 ವಿಭಾಗಗಳು ಸ್ಪರ್ಥೆಯಲ್ಲಿ ಭಾಗವಹಿಸಲಿದ್ದು ಜೊತೆಗೆ ಕಾಲೇಜು ವಾರ್ಷಿಕೋತ್ಸವದ ಅ೦ಗವಾಗಿ ನಡೆದ ಸಾಹಿತಿಕ ಹಾಗೂ ಸಾ೦ಸ್ಕೃತಿಕ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆಯಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ. ತೀರ್ಪುಗಾರರಾಗಿ ಪ್ರವೀಣ್ ವರ್ಣಕುಟೀರ, ವಿದುಷಿ ವಸುಧಾ, ವಿದುಷಿ ಪ್ರತೀಕ್ಷ ಆಚಾರ್ಯ ನಿರ್ವಹಿಲಿದ್ದಾರೆ.