ರಾಷ್ಟ್ರ ಮಟ್ಟದ ಸರ್ಫಿಂಗ್‌ನಲ್ಲಿ ದ್ವಿತೀಯ

ಭಾರತದ ನಂಬರ್ ವನ್ ಕಿರಿಯ ಸರ್ಫರ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಪುತ್ತೂರಿನ ಸಿಂಚನಾ ಡಿ. ಗೌಡ ಅಗಸ್ಟ್ 25 ಮತ್ತು 26ರಂದು ತಮಿಳುನಾಡಿನ ಚೆನ್ನೈ ಕೊವೆಲಂಬಿ ಪಾಯಿಂಟ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸರ್ಫ್ ಮ್ಯೂಸಿಕ್ ಮತ್ತು ಯೋಗ ಸ್ಪರ್ಧೆಯ ಸರ್ಫಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕರ್ನಾಟಕದಿಂದ ಒಟ್ಟು ನಾಲ್ಕು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಪೈಕಿ ಸಿಂಚನಾ ದ್ವಿತೀಯ ಸ್ಥಾನದೊಂದಿಗೆ ರೂ. 15000 /- ನಗದು ಹಾಗೂ ಪ್ರಶಸ್ತಿ ಫಲಕ ಪಡೆದುಕೊಂಡಿರುತ್ತಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗಮನಾರ್ಹವಾದ ಸಾಧನೆಗೈದಿರುವ ಇವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ಈಕೆ ನೆಹರು ನಗರದ ಟಿ.ಡಿ. ಗೌಡ ಮತ್ತು ಮೀನಾಕ್ಷಿ ಡಿ. ಗೌಡ ದಂಪತಿಯ ಪುತ್ರಿಯಾಗಿರುತ್ತಾರೆ.