ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಫಿಲೋಮಿನಾದ ಸೂರಜ್ ಭಂಡಾರಿ, ನಯನರವರಿಗೆ ಪ್ರಶಸ್ತಿ

ಮಂಗಳೂರು ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನ.8ರಿಂದ 10ರ ವರೆಗೆ ಜರಗಿದ 37ನೇ ಬುಡೋಕಾನ್ ಕರಾಟೆ-ಡು ಇಂಡಿಯಾ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್-2019 ಇದರಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಈರ್ವರು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಪಡುಬಿದ್ರಿಯ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆಟ್ರ್ಸ್‍ನ ನೇತೃತ್ವದಲ್ಲಿ ಕ್ರೀಡಾ ಭಾರತಿ ಮಂಗಳೂರು, ತಲಪಾಡಿ ವಿದ್ಯಾನಗರದ ಫಲಾಹ ಎಜ್ಯುಕೇಶನಲ್ ಇನ್ಸ್ಟಿಟ್ಯೂಶನ್ಸ್ ಇದರ ಸಹಯೋಗದಲ್ಲಿ ನಡೆದ ಪಂದ್ಯಾಕೂಟದಲ್ಲಿ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಸೂರಜ್ ಭಂಡಾರಿರವರು ಕಟಾದಲ್ಲಿ ಪ್ರಥಮ, ಟೀಮ್ ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ ಸ್ಥಾನ ಮತ್ತು ನಯನಾರವರು ಟೀಮ್ ಕಟಾದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಇವರೀರ್ವರಿಗೆ ಸೆನ್ಸಾಯಿ ಟಿ.ಡಿ ತೋಮಸ್‍ರವರು ತರಬೇತಿ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.