ಕಾನೂನಿನ ಅರಿವು ಕಾರ್ಯಗಾರ

ಭಾರತೀಯ ಪ್ರಜ್ಞಾವಂತ ನಾಗರಿಕನೆನೆಸಿಕೊಳ್ಳಬೇಕಾದರೆ ಆತನಿಗೆ ಕಾನೂನಿನ ಅರಿವು ಅಗತ್ಯ. ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿದ್ದರೂ ಮತ್ತೊಬ್ಬರಿಗೆ ಪ್ರಹಾರವಿಕ್ಕದೇ ಭಾರತೀಯ ಸಂವಿಧಾನದಲ್ಲಿ ಕಾನೂನನ್ನು ತಿಳಿದುಕೊಂಡು ದೇಶಕ್ಕೆ ಕೊಡುಗೆ ನೀಡುವವರಾಗಬೇಕು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನಿರ್ದೇಶಕರಾದ ಡಾ|ಬಿ.ಕೆ ರವೀಂದ್ರರವರು ಹೆಳಿದರು.

ಅವರು ನ.22 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ `ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸುವುದು ಹೇಗೆ’ ಎಂಬ ಬಗ್ಗೆ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾನೂನನ್ನು ವಿವಿಧ ಸಂಸ್ಥೆಗಳ ಮೂಲಕ ಭೌಗೋಳಿಸಲಾಗುತ್ತಿದ್ದು, ನಮ್ಮ ಜೀವನ ಮತ್ತು ಸಮಾಜಕ್ಕೆ ಕಾನೂನು ಹಲವು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ನಮ್ಮ ಸಂವಿಧಾನದಲ್ಲಿ ಪ್ರಸ್ತಾಪಿಸಲಾದ ವಿಭಿನ್ನ ರೀತಿಯ ಕಾನೂನುಗಳ ಬಗ್ಗೆ ವಿವರಣೆ ನೀಡಿದರು. ಮೂಲಭೂತ ಹಕ್ಕುಗಳು ನೀತಿ ನಿರ್ದೇಶನ ತತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿಯ ಅಗತ್ಯವಿದ್ದು ಇದರ ಲಾಲನೆ ಪೋಷಣೆಯಾಗಬೇಕಿದೆ. ಭಾರತೀಯ ಸಂವಿಧಾನದಲ್ಲಿ ಜಾತಿ-ಧರ್ಮದ ಬೇಧವಿಲ್ಲದಂತೆ ಪ್ರತಿಯೋರ್ವನಿಗೂ ಸಮನಾಗಿ ಬಾಳುವ ಅವಕಾಶವನ್ನು ಮಾಡಿಕೊಟ್ಟಿದೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳದೆ ಕಾನೂನಿನ ಉಪಯೋಗವಾಗಬೇಕಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದರು.

ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಭರತ್ ಕುಮಾರ್ ಸ್ವಾಗತಿಸಿ, ವಂದಿಸಿದರು.