ರಾಜ್ಯ ಮಟ್ಟದ ಮುಕ್ತ ಕರಾಟೆ ಛಾಂಪಿಯನ್ ಶಿಪ್ 2018 ಸ್ಪರ್ಧೆ

ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್ ಶಿಟೋರಿಯೋ ಕರಾಟೆ ಡೋ ಹಾಗೂ ಜೆಸಿಐ ಸುಳ್ಯ ಪಯಸ್ವಿನಿ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಮುಕ್ತ ಕರಾಟೆ ಛಾಂಪಿಯನ್ ಶಿಪ್ 2018 ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ನಯನಾ ಇವರು ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆಯನ್ನು ಗೈದಿದ್ದಾರೆ.

ವೈಯುಕ್ತಿಕ ಕಟಾ ಹಾಗೂ ಕುಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಟೀಮ್ ಕಟಾದಲ್ಲಿ ದ್ವಿತೀಯ ಸ್ಥಾನವನ್ನಿ ಪಡೆದುಕೊಂಡಿದ್ದಾರೆ. ಪುತ್ತೂರಿನ ಶಿಟೋರಿಯಾದ ಟಿ.ಡಿ. ಥೋಮಸ್ ಇವರಲ್ಲಿ ತರಭೇತಿಯನ್ನು ಪಡೆದಿರುತ್ತಾರೆ. ಕೆಮ್ಮಿಂಜೆ ನಿವಾಸಿ ಕೆ ವೆಂಕಟೇಶ್ ಹಾಗೂ ರೇಣಿಕಾ ದಂಪತಿಗಳ ಪುತ್ರಿಯಾಗಿರುತ್ತಾರೆ.