ಜನಪದ- ಬದುಕು ಬದಲಾವಣೆ – ಒಂದು ಚಿಂತನೆ

ತುಳು ಎಂಬುದು ಕೇವಲ ಒಂದು ಭಾಷೆ ಅಲ್ಲ. ಅದು ನಮ್ಮ ಜೀವನ ಕ್ರಮವು ಆಗಿದೆ. ನಮ್ಮ ಬದುಕಿನ ಕ್ರಮ ಏನು ? ಮತ್ತು ಅದು ಹೇಗೆ ಬದಲಾವಣೆಗೊಳ್ಳುತ್ತಿದೆ ಎಂದುವುದನ್ನು ನಾವು ತಿಳಿದುಕೊಳ್ಳಬೇಕಾಗಿದೀಂದು ಜನಪದ ಸಂಶೋಧಕರಾದ ಡಾ| ಸುಂದರ್ ಕೇನಾಜೆ ಹೇಳಿದರು.

ಅವರು ಸೆ.27ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವ್ಜ್ರ ಮಹೋತ್ಸವದ ಅಂಗವಾಗಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಜನಪದ – ಬದುಕು ಬದಲಾವಣೆ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಜನಪದ ಎಂದರೆ ನಾವು ನಮ್ಮ ಜೊತೆಗಿರುವ ಆಚಾರ ವಿಚಾರ ನಡೆ ನುಡಿ ಭಾಷೆ, ವೃತ್ತಿ, ಆಚರಣೆಗಳು, ಸಂಬಿಕೆಗಳು, ಭೌತಿಕೆ ವಸ್ತುಗಳು ಜನಪದ ಬದುಕು ಕೃಷಿಯ ವಿಚಾರದಲ್ಲಿ ಅಪಾಯದ ಸ್ಥಿತಿಯಲ್ಲಿದೆ.ಜನಪದ ಆರಾಧನೆ ಅತ್ಯಂತ ಪುರಾತನವಾಗಿದ್ದು, ಜನಸಾಮಾನ್ಯರ ನಡುವೆ ಇರುವಂತದ್ದು ವ್ಯಕ್ತಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ವೃತ್ತಿ, ನಂಬಿಕೆ, ಬದುಕು ಇವುಗಳ ಹಿಂದೆ ಮೆದುಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿತ್ತು. ಆದರೆ ಇಂದು ಬದಲಾವಣೆಯನ್ನು ಪಡೆದುಕೊಂಡಿದೆ. ನಾವು ಈ ಪ್ರಕೃತ್ತಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಆಚರಣೆ, ಆರಾಧನೆ, ಕೃಷಿ, ಬದುಕು ಎಲ್ಲವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ. ನಮ್ಮತಿಳುವಳಿಕೆಯನ್ನು ಬೆಳೆಸತಕ್ಕಂತಹ ಇಡೀ ಬದುಕಿನ ಕ್ರಮವನ್ನು ರೂಪಿಸಲು ಸಾಧ್ಯವಾಗುವುದಾದರೆ ಅದು ದೊಡ್ಡದು. ನಾವು ನಮ್ಮ ಪ್ರಕೃತಿ, ಮಣ್ಣು, ನೀರು ಇವುಗಳನ್ನು ಆರಾಧಿಸೋಣ ಎಂದು ವಿದ್ಯಾರ್ಥಿಗಳಿಗೆ ಪ್ರಕೃತಿಯ ಪ್ರಾಮುಖ್ಯತೆಯ ಬಗ್ಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ವಿಜಯ್ ಲೋಬೊ ಮಾತನಾಡಿ ಜನಪದ ಎಂಬುದು ಒಂದು ನಮ್ಮ ಸಂಸ್ಕ್ರತಿಯ ಭಾಗವಾಗಿದೆ. ನಮಗೆ ಮೌಖಿಕವಾಗಿ ಲಭಿಸಿದ್ದು, ಇದು ಅತ್ಯಂತ ಪ್ರಾಚೀನವಾದ ವಿಷಯವಾದರೂ ನಮ್ಮ ಸಂಸ್ಕ್ರತಿ ಹಾಗೂ ಪರಿಸರವನ್ನು ಉತ್ತಮಗೊಳಿಸುವದು ನಮ್ಮೆಲ್ಲರ ಪ್ರಮುಖ ಕರ್ತವ್ಯಾವಾಗಿದೆ ಎಂದರು.

ಕನ್ನಡ ಸಂಘದ ಸಂಯೋಜಕಿ ಉಷಾ ಯಶವಂತ್ ಹಾಗೂ ಕನ್ನಡ ಉಪನ್ಯಾಸಕರಾದ ಸುಮನಾ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಚಿತ್ರಾ ಪ್ರಾರ್ಥಿಸಿ, ಆಕಾಶ್ ಸಿ. ಭಟ್ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ಲಹರಿ ಎಹ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.