ಜೆ ಇ ಇ ಮೈನ್ಸ್ 2020 ಫಲಿತಾಂಶ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

2020 ಸಾಲಿನ ಎರಡನೇ ಹಂತದ ಜೆ ಇ ಇ ಮೈನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಉತ್ತಮ ಪರ್ಸೆಂಟೈಲ್ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಮೊಹಮ್ಮದ್ ಸುಲ್ತಾನ್ (94.38), ಬೆವನ್ ಮ್ಯಥ್ಯು(93.23), ಕಿಶನ್ ವಿವೆಲ್ ಮಸ್ಕರೇನಸ್(91.7), ಯಶಸ್(89.2), ಸೃಜನ್ ರೈ(86.37), ಸಫ್ವಾನ್ (81.5), ವಿನೀತ್ ಜಿ. ಆರ್(79.34),  ಪ್ರೀತಮ್ ಮಸ್ಕರೇನಸ್(79),  ಯುಕ್ತ ಪಿ.ಕೆ(68.7).ಅವರು ಜ್ ಇ ಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಪರ್ಸೆಂಟೈಲ್ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದು,  ಜೆ ಇ ಇ ಅಡ್ವಾನ್ಸ ಡ್   ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ/ವಿಜಯ್ ಲೋಬೋ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.