ಅಂತರಾಷ್ಟ್ರೀಯ ಚೆಸ್ ಟೂರ್ನಮೆಂಟ್‌

ರಾಜಸ್ಥಾನದ ಉದಯ ಪುರದ ಮಹಾಪ್ರಾಗ್ಯ ವಿಹಾರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮುಕ್ತ ‘5th ಎನ್ ಎಲ್ ಪಾಂಡಿಯಾರ್ ಮೆಮೊರಿಯಲ್ ಇಂಟರ್ ನ್ಯಾಷನಲ್ ಓಪನ್ FIDE ರೇಟೆಡ್ ಚೆಸ್ ಟೂರ್ನಮೆಂಟ್’ ನಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಶಾಂತ್ ನಾಕ್ ಹಾಗೂ ಬ್ರಿಯಾನ್ ರಾಲ್‌ಸ್ಟನ್ ಗೋವಿಯಸ್ ಭಾಗವಹಿಸಿರುತ್ತಾರೆ.

ಇಲೋ ಬಿಲೋ-1600-1900ರಲ್ಲಿ ಪ್ರಶಾಂತ್ ನಾಕ್‌ರವರು ಏಳನೇ ಸ್ಥಾನವನ್ನು ಪಡೆದುಕೊಂಡಿದ್ದು,10 ಸಾವಿರ ನಗದು, ಫಲಕ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.ಬ್ರಿಯಾನ್ ರಾಲ್‌ಸ್ಟನ್ ಗೋವಿಯಸ್ 15ನೇ ಸ್ಥಾನವನ್ನು ಪಡೆದಿರುತ್ತಾರೆ.