ಮಾಹಿತಿ ಕಾರ್ಯಾಗಾರ

ಯಾವುದೇ ವೈರಸ್ ಸೂಕ್ಷ್ಮಾಣುಗಳು ದೇಹದೊಳಗೆ ಪ್ರವೇಶವಾದರೆ ಮಾನವನಿಗೆ ಕಾಯಿಲೆ ಬರಬಹುದು ಎಂಬರ್ಥ. ಜ್ವರ ಎಂಬುದು ಕಾಯಿಲೆಯಲ್ಲ. ಅದು ಜ್ವರದ ಲಕ್ಷಣವಾಗಿದೆ. ಜ್ವರ ಬಂದಾಗ ವಿಪರೀತ ಭಯಬೀಳುವಂತಹ ಅಗತ್ಯವೂ ಇಲ್ಲ. ಆದರೆ ನಿರ್ಲಕ್ಷ್ಯವನ್ನು ಮಾತ್ರ ಮಾನವ ಹೊಂದಬಾರದು ಎಂದು ವೈದ್ಯರಾದ ಪುರುಷರಕಟ್ಟೆ ಪ್ರಸಾದ್ ಕ್ಲಿನಿಕ್ ಮತ್ತು ಹೆಲ್ತ್‍ಕೇರ್ ಸೆಂಟರ್‍ನ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕರವರು ಹೇಳಿದರು.

ಅವರು ಜೂ.18 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಇಕೋ ಕ್ಲಬ್‍ನ ವತಿಯಿಂದ ಹಾಗೂ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು, ಪುರುಷರಕಟ್ಟೆ, ಪುರುಷರಕಟ್ಟೆ ಪ್ರಸಾದ್ ಕ್ಲಿನಿಕ್ ಮತ್ತು ಹೆಲ್ತ್‍ಕೇರ್ ಸೆಂಟರ್‍ನ ಸಹಯೋಗದಲ್ಲಿ ಕಾಲೇಜ್‍ನ ಆಡಿಯೋ ವಿಶ್ಯುವಲ್ ಸಭಾಂಗಣದಲ್ಲಿ ನಡೆದ ಡೆಂಗ್ಯೂ, ಮಲೇರಿಯ, ನಿಪ ಜ್ವರ ಇವುಗಳ ನಿಯಂತ್ರಣ, ಸ್ವಚ್ಚತೆ ಬಗೆಗಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮಲೇರಿಯ, ಡೆಂಗ್ಯೂ ಆಗಲಿ ಬಹಳ ಮಾರಣಾಂತಿಕ ಕಾಯಿಲೆ ಅಲ್ಲ. ಇವುಗಳಿಂದ ಸಾವು ನೋವು ಆಗಿರುವ ಘಟನೆ ಎಲ್ಲಿಯೂ ನಡೆದಿಲ್ಲ. ಆದರೆ ವ್ಯಕ್ತಿಗೆ ಬೇರೊಂದು ಕಾಯಿಲೆ ಇದ್ದ ಸಂದರ್ಭದಲ್ಲಿ ಮಾತ್ರ ಇಂತಹ ಜ್ವರದ ಲಕ್ಷಣವುಳ್ಳವರು ಸಾವಿಗೆ ತುತ್ತಾಗಿರೋದು ಸತ್ಯ. ಮಲೇರಿಯ ಹಾಗೂ ಡೆಂಗ್ಯೂಗಿಂತ ಇಲಿಜ್ವರ ಮನುಷ್ಯನಿಗೆ ಕಾಣಿಸಿಕೊಂಡರೆ ಅದು ಬಹಳ ಅಪಾಯಕಾರಿ ಎಂದ ಅವರು ಜ್ವರ ಬಂದಕ್ಷಾಣ ನಾವು ಮುನ್ನೆಚ್ಚರಿಕ ಕ್ರಮವನ್ನು ಕೈಗೊಂಡರೆ ಬಹಳ ಉತ್ತಮ. ಜ್ವರ ಎಂಬುದು ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಮಲೇರಿಯ ರೋಗದಲ್ಲಿ ಸೊಳ್ಳೆಗಳು ರಾತ್ರಿ ಮತ್ತು ಡೆಂಗ್ಯೂ ಜ್ವರದಲ್ಲಿ ಸೊಳ್ಳೆಗಳು ಹಗಲು ಕಚ್ಚುತ್ತವೆ ಎಂಬುದು ಸತ್ಯವಾಗಿದೆ. ಸೊಳ್ಳೆಗಳು ಮನುಷ್ಯನಿಗೆ ಕಚ್ಚುವ ವಿಧಾನದಲ್ಲೂ ವ್ಯತ್ಯಾಸವನ್ನು ನಾವು ಅರಿಯಬೇಕಾಗಿದೆ ಎಂದ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ಯಾವುದೇ ಕಾಯಿಲೆಯನ್ನು ಮನುಷ್ಯ ಲಘುವಾಗಿ ತೆಗೆದುಕೊಂಡರೆ ಅದು ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ಕಾಯಿಲೆಯನ್ನು ಲಘುವಾಗಿ ಪರಿಗಣಿಸದೆ ತಜ್ಞ ವೈದ್ಯರಲ್ಲಿ ಹೋಗಿ ಕಾಯಿಲೆಯ ಬಗ್ಗೆ ಪರೀಕ್ಷಿಸಬೇಕಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರತಿಯೋರ್ವರು ಸ್ವಚ್ಚತೆಯಾಗಿ ಇಟ್ಟುಕೊಂಡಲ್ಲಿ ಮಲೇರಿಯ, ಡೆಂಗ್ಯೂ ಮುಂತಾದ ಕಾಯಿಲೆಗಳನ್ನು ತಡೆಗಟ್ಟಬಹುದುದಾಗಿದೆ. ಆದರೆ ಸೋಮಾರಿಯಾಗಿರುವ ಮಾನವ ತನ್ನ ಕೃತ್ಯದಿಂದಲೇ ರೋಗಗಳನ್ನು ಆಹ್ವಾನಿಸಬಹುದಾಗಿದೆ ಎಂದರು.

ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು, ಪುರುಷರಕಟ್ಟೆ ಇದರ ಅಧ್ಯಕ್ಷೆ ಗುರುಪ್ರಿಯಾ ನಾಯಕ್, ಇಕೋ ಕ್ಲಬ್ ನಿರ್ದೇಶಕರಾದ ಕವಿತಾ ಕೆ. ಶಿಲ್ಪಾ ರೊಡ್ರಿಗಸ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಕ್ಷಿತಾ ರೈ ಮತ್ತು ಬಳಗ ಪ್ರಾರ್ಥಿಸಿದರು. ಇಕೋ ಕ್ಲಬ್ ಅಧ್ಯಕ್ಷ ವೈಶಾಕ್ ಕೆ.ಎನ್ ಸ್ವಾಗತಿಸಿ, ಕಾರ್ಯದರ್ಶಿ ಸ್ಪರ್ಶಾ ಶೆಟ್ಟಿ ವಂದಿಸಿದರು. ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

 
ಬಾಕ್ಸ್

ಮೈಕೈ ನೋವು, ಗಂಟು ನೋವು, ವಿಪರೀತ ಸುಸ್ತು ಮುಂತಾದ ಲಕ್ಷಣಗಳು ಡೆಂಗ್ಯೂ ಜ್ವರದಲ್ಲಿ ಕಾಣ ಸಿಗುತ್ತದೆ. ಇಂತಹ ಲಕ್ಷಣಗಳು ಬಂದಾಗ ವ್ಯಕ್ತಿಯಲ್ಲಿ ರಕ್ತದಲ್ಲಿನ ಬಿಳಿ ರಕ್ತಕಣ ಹಾಗೂ ಕೆಂಪು ರಕ್ತಕಣದಲ್ಲಿನ ಪ್ಲೇಟ್‍ಲೆಟ್ ಗಣನೀಯವಾಗಿ ಕುಸಿತ ಕಾಣುವುದು. ಸುಮಾರು 1.50 ಲಕ್ಷಕ್ಕಿಂತ ಮಿಕ್ಕಿ ಪ್ಲೇಟ್‍ಲೆಟ್ ಇದ್ದಲ್ಲಿ ಒಮ್ಮೆಲೆ 10-20-25 ಸಾವಿರಕ್ಕೆ ಇಳಿಮುಖ ಕಾಣುವುದಾಗಿದೆ. ಈ ರೀತಿ ಕಂಡು ಬಂದಾಗ ಕೂಡಲೇ ರಕ್ತವನ್ನು ವ್ಯಕ್ತಿಗೆ ನೀಡಿ ಪ್ಲೇಟ್‍ಲೆಟ್‍ನ್ನು ಹೆಚ್ಚಿಸಬೇಕಾಗುತ್ತದೆ. ಪ್ಲೇಟ್‍ಲೇಟ್ ಕಡಿಮೆಯಾದಾಗ ಯಾವುದೇ ವಿಧದಲ್ಲಾಗಲಿ ರಕ್ತಸ್ರಾವ ಆಗಬಹುದು. ಸುಮಾರು 100-108 ಡಿಗ್ರಿ ಸೆಲ್ಸಿಯಸ್ ಜ್ವರ ಬಂದೊಡನೆ ಅಥವಾ ಮೂರು ದಿನಗಳಿಂದ ಜಾಸ್ತಿ ಇದ್ದಾಗ ತಕ್ಷಣ ವ್ಯೆದ್ಯರಲ್ಲಿ ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಲವಣಗಳು ಹಾಗೂ ದ್ರವಣಾಂಶ ವಸ್ತುಗಳನ್ನು ಹೆಚ್ಚಾಗಿ ಸೇವಿಸಬೇಕು.

-ಡಾ.ರಾಘವೇಂದ್ರ ಪ್ರಸಾದ್, ಪ್ರಸಾದ್ ಕ್ಲಿನಿಕ್ ಮತ್ತು ಹೆಲ್ತ್‍ಕೇರ್ ಸೆಂಟರ್