ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಗಾರ

ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ನಗರ ಮಹಿಳಾ ಠಾಣೆಯ ಇನ್ಸ್‍ಪೆಕ್ಟರ್ ಶ್ರೀ ತಿಮ್ಮಪ್ಪ ನಾಯ್ಕ ಇವರು ಪೋಕ್ಸೋ ಕಾಯಿದೆಯ ಬಗ್ಗೆ ಬೆಳಕು ಚೆಲ್ಲಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಲು ಪೋಕ್ಸೋ ಕಾಯ್ದೆ ಯಾವುದೇ ಸಮಯದ ಮಿತಿಯನ್ನು ಒದಗಿಸುವುದಿಲ್ಲ. ಸಂತ್ರಸ್ಥರು ಯಾವುದೇ ವಯಸ್ಸಿನಲ್ಲಿ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಬಹುದು.ಈ ಕಾಯ್ದೆಯಡಿ ಯಾವ ಅಪರಾಧ ಎಸಗಲಾಗಿದೆ ಎಂಬ ಆತಂಕದಲ್ಲಿರುವ ಯಾವುದೇ ವ್ಯಕ್ತಿ ತಕ್ಷಣದ ಮತ್ತು ಸೂಕ್ತ ಕ್ರಮಕ್ಕಾಗಿ ವಿಶೇಷ ಬಾಲಾಪರಾಧಿ ಪೊಲೀಸ್ ಘಟಕ ಅಥವಾ ಸ್ಥಳೀಯ ಪೊಲೀಸರಿಗೆ ದೂರು ಒದಗಿಸಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಪ್ರೊಬೇಷನರಿ DYSP ಧನ್ಯ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿರಬೇಕು ಎಂದು ತಿಳಿಸಿದರು. ಪೋಕ್ಸೋ ಕಾಯಿದೆಯು ನಿಮ್ಮ ಕೈಯಲ್ಲಿರುವ ಒಂದು ಅತ್ಯಂತ ಶಕ್ತಿಯುತ ಆಯುಧವಾಗಿದ್ದು, ವಿದ್ಯಾರ್ಥಿಗಳು ಯಾವುದೇ ರೀತಿಯ ದೌರ್ಜನ್ಯಗಳು ಆದಾಗ ಭಯಪಡದೆ ಧೈರ್ಯದಿಂದ ಪೊಲೀಸರನ್ನು ಸಂಪರ್ಕಿಸಬೇಕೆಂದು ತಿಳಿಸಿದರು. ಪೊಲೀಸ್ ಇಲಾಖೆ ಸಮಾಜದ ಸೇವೆಗಾಗಿ ಇದ್ದು, ಪೊಲೀಸರನ್ನು ಸಂಪರ್ಕಿಸಲು ಯಾವುದೇ ಹಿಂಜರಿಕೆ ಬೇಡ ಎಂದು ಹುರಿದುಂಬಿಸಿದರು. ಕ್ಯಾಂಪಸ್ ನಿರ್ದೇಶಕರಾದ ರೆ. ಫಾ ಸ್ಟ್ಯಾನೀ ಪಿಂಟೊ ಮಾತನಾಡಿ ಇಂತಹ ಮಾಹಿತಿಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ ಪೊಲೀಸ್ ಇಲಾಖೆಯನ್ನು ಮತ್ತು ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ವಿಜಯ್ ಲೋಬೋ ಸ್ವಾಗತಿಸಿ, ಡಾ. ಆಶಾ ಸಾವಿತ್ರಿ ಅವರು ಕಾರ್ಯಕ್ರಮ ನಿರೂ ಪಿಸಿ ವಂದಿಸಿದರು.