ಕೈಗಾರಿಕಾ ಅಧ್ಯಯನ

ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಿಜ್ಞಾನ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಮಂಗಳೂರಿನ ಕೆಎಂಎಫ್ ಹಾಗೂ ತುಂಬೆ ವೆಂಟೆಡ್ ಡ್ಯಾಂ ಕೈಗಾರಿಕಾ ಪ್ರದೇಶಕ್ಕೆ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಭೇಟಿ ನೀಡಿದ್ದರು.

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅವುಗಳು ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿ ಉಪಯೋಗ ಬೀರಬಲ್ಲುದು ಎಂಬ ಕುರಿತು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಿಜ್ಞಾನ ಸಂಘವು ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕೈಗಾರಿಕಾ ಭೇಟಿಯನ್ನು ಏರ್ಪಡಿಸಲಾಗಿತ್ತು. ಸುಮಾರು 20 ವಿದ್ಯಾರ್ಥಿಗಳ ತಂಡವು ಈ ಕೈಗಾರಿಕಾ ಅಧ್ಯಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಅಧ್ಯಯನ ಕಾರ್ಯಕ್ರಮದಲ್ಲಿ ಕೆಎಂಎಫ್‌ಗೆ ಭೇಟಿ ನೀಡಿ ಅಲ್ಲಿ ಹಾಲು ಪೂರೈಕೆ, ಸಂಸ್ಕರಿಸುವ ವಿಧಾನಗಳು, ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರು ಮಾಡುವ ವಿವಿಧ ಹಂತಗಳು, ಉತ್ಪಾದನೆಗೆ ಅಗತ್ಯವಿರುವ ಕಚ್ಚಾವಸ್ತುಗಳು, ದೇಶ-ವಿದೇಶಗಳಲ್ಲಿ ಹಾಲಿನ ಉತ್ಪನ್ನಗಳಿಗೆ ಇರುವ ಬೇಡಿಕೆ ಹಾಗೂ ಲಾಭಾಂಶಗಳ ಕುರಿತು ಚರ್ಚಿಸಿ ಬಳಿಕ ತುಂಬೆ ವೆಂಟೆಡ್ ಡ್ಯಾಂಗೆ ಆಗಮಿಸಿ ಅಲ್ಲಿ ನೀರಿನ ಪೂರೈಕೆ ಹಾಗೂ ಶುದ್ಧೀಕರಣದ ಮಾಹಿತಿಯನ್ನು ಪಡೆಯಲಾಯಿತು.

ಕಾಲೇಜು ಪ್ರಾಂಶುಪಾಲ ವಂ|ವಿಜಯ್ ಲೋಬೋರವರ ಮಾರ್ಗದರ್ಶನದಲ್ಲಿ ವಿಜ್ಞಾನ ಸಂಘದ ಸಂಯೋಜಕರಾದ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಾ ಹಾಗೂ ಉಪನ್ಯಾಸಕ ನಿರಂಜನ್‌ರವರು ವಿದ್ಯಾರ್ಥಿಗಳ ತಂಡದ ನೇತೃತ್ವ ವಹಿಸಿದ್ದರು.