ರಾಜ್ಯದಲ್ಲಿ ಫಿಲೋಮಿನಾಗೆ 3 ರ‍್ಯಾಂಕ್‌ಗಳು, ತಾಲೂಕಿನಲ್ಲಿ ಪ್ರಥಮ ವಿಜ್ಞಾನ ವಿಭಾಗದಲ್ಲಿ 1, ವಾಣಿಜ್ಯ ವಿಭಾಗದಲ್ಲಿ 2 ರ‍್ಯಾಂಕ್‌

2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಶೇ.94 ಫಲಿತಾಂಶ ಲಭಿಸಿದೆ ಮಾತ್ರವಲ್ಲ ವಿಜ್ಞಾನ ವಿಭಾಗದಲ್ಲಿ 2 ಮತ್ತು ವಾಣಿಜ್ಯ ವಿಭಾಗದಲ್ಲಿ 2 ರ‍್ಯಾಂಕ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಮಾತ್ರವಲ್ಲದೆ ತಾಲೂಕಿನಲ್ಲಿಯೂ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದೆ. ಕಳೆದ ಬಾರಿಯೂ ಕಾಲೇಜು ಮೂರು ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿತ್ತು.

ಶೇ.95ಕ್ಕಿಂತ ಹೆಚ್ಚಿನ ಅಂಕಗಳನ್ನು ಈ ಬಾರಿ ಕಾಲೇಜಿನ 27 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸುಧನ್ವ ಶ್ಯಾಂರವರು ಒಟ್ಟು 591 ಅಂಕಗಳನ್ನು ಪಡೆದು ರಾಜ್ಯದಲ್ಲಿ ಆರನೇ ರ‍್ಯಾಂಕ್‌ನ್ನು, ಶ್ರುತಿ ಯು.ಎಸ್. ಒಟ್ಟು 589 ಅಂಕಗಳನ್ನು ಪಡೆದು ರಾಜ್ಯದಲ್ಲಿ 8ನೇ ರ‍್ಯಾಂಕ್‌ ಮತ್ತು ವಾಣಿಜ್ಯ ವಿಭಾಗದಲ್ಲಿ ರಿತೇಶ್ ರೈ ಎಂ ಹಾಗೂ ಅನೂಪ್ ಬಿ.ವಿ.ರವರು ತಲಾ 590 ಅಂಕಗಳನ್ನು ಪಡೆದು ರಾಜ್ಯದಲ್ಲಿ ಎಂಟನೇ ರ‍್ಯಾಂಕ್‌ಗಳನ್ನು ಗಳಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗದ ಸುಧನ್ವ ಶ್ಯಾಂರವರು ಇಂಗ್ಲೀಷ್‍ನಲ್ಲಿ 95, ಸಂಸ್ಕೃತದಲ್ಲಿ 98, ಫಿಸಿಕ್ಸ್ ನಲ್ಲಿ 98, ಕೆಮೆಸ್ಟ್ರಿಯಲ್ಲಿ 99, ಮ್ಯಾಥ್ಸ್ ನಲ್ಲಿ 100, ವಿಜ್ಞಾನ ವಿಭಾಗದ ಶ್ರುತಿ ಯು.ಎಸ್. ರವರು ಇಂಗ್ಲೀಷ್ 92, ಹಿಂದಿ 98, ಫಿಸಿಕ್ಸ್ 100, ಕೆಮೆಸ್ಟ್ರೀ 100, ಗಣಿತ 99, ಜೀವಶಾಸ್ತ್ರ 100, ವಾಣಿಜ್ಯ ವಿಭಾಗದ ರಿತೇಶ್ ರೈಯವರು ಸಂಸ್ಕೃತ, ವ್ಯವಹಾರ ಅಧ್ಯಯನ, ಅಂಕಗಣಿತ, ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ 100, ಇಂಗ್ಲೀಷ್‍ನಲ್ಲಿ 90 ಮತ್ತು ಅನೂಪ್‍ರವರು ಅಂಕಗಣಿತ, ಸಂಸ್ಕೃತ, ಎಕನಾಮಿಕ್ಸ್‍ಲ್ಲಿ ತಲಾ 100, ವ್ಯವಹಾರ ಅಧ್ಯಯನ 98, ಇಂಗ್ಲೀಷ್‍ನಲ್ಲಿ 92 ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ನಿಶಾಂತ್‍ರವರು 549 ಅಂಕಗಳನ್ನು ಗಳಿಸಿ ವಿಭಾಗದಲ್ಲಿ ಪ್ರಥಮರೆನಿಸಿಕೊಂಡಿದ್ದಾರೆ.

ಒಟ್ಟು 532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಸರಾಸರಿ 94 ಶೇಕಡಾ ಪಲಿತಾಂಶ ಹೊಂದಿದ್ದು ಇವರಲ್ಲಿ 125 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 301 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 55 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕಲಾ ವಿಭಾಗದಲ್ಲಿ ಶೇ.93, ವಾಣಿಜ್ಯ ವಿಭಾಗದಲ್ಲಿ ಶೇ.94 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.94 ಫಲಿತಾಂಶ ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

591 SUDHANVA SHYAM S

590 RITHESH RAI M

590 ANOOP B V

589 SHRUTHI V S

586 SHOBITH RAI M

586 SHARVARI RAI K B

586 K PUNITH

586 ARPITHA K

585 YASHAS

585 RINETTE VERONICA FERNANDES

584 ALICIA LIMA PEREIRA

581 BEVAN MATHEW A

579 SUDARSHAN HEBBAR K

579 SHASHANKA

579 RISTON SOHAN DSOUZA

578 AHANA B

577 DHEEMANTH SHETTY J P

577 ANUSHREE

576 SHREEGANESH

575 DEEPAK ACHARYA K

574 THRUPTHI V S

573 THEJASWI K S

571 SANGEETHA S

571 MELITA PAIS

570 SWASTHIKA

570 RAMEES JAMAN

570 MAHAMMAD SULTHAN A S

549 NISHANTH- ARTS TOPPER