‘ಹಿಂದಿ ದಿವಸ’ ಕಾರ್ಯಕ್ರಮ

ಸಂತ ಫಿಲೋಮಿನಾ ಪದವಿ ಪೂರ್ವ ಕಾಳೇಜು ಹಾಗೂ ಹಿಂದಿ ಸಭಾ ದ ಆಶ್ರಯದಲ್ಲಿ ಹಿಂದಿ ದಿವಸ ಕಾರ್ಯಕ್ರಮವು ಸೆ. 17 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಹಿಂದಿ ಪ್ರಾಧ್ಯಾಪಕಿಯಾದ ಶ್ರೀಮತಿ ಶೋಭಾ ರವರು ಮಾತನಾಡಿ ವಿಶ್ವದ ಸಂಸ್ಕ್ರತಿಗಳ ಐತಿಹಾಸಿಕ ಅಭಿವೃದ್ಧಿಯಲ್ಲಿ ಹಿಂದಿ ಭಾಷೆಯು ಪ್ರಮುಖ ಪಾತ್ರವನ್ನು ವಹಿಸಿದೆ. ವಿದ್ಯಾರ್ಥಿಗಳಲ್ಲಿ ಹಿಂದಿ ಭಾಷೆಯನ್ನು ಕಲಿಯುವಂತೆ ಪ್ರೋತ್ಸಾಹಿಸಬೇಕು. ರಾಷ್ಟ್ರಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವಲ್ಲಿಹಿಂದಿ ಭಾಷೆಯು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹ್ಸಿದ ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಜಯ್ ಲೋಬೊ ಮಾತನಾಡಿ ಹಿಂದಿ ಎಂಬುದು ನಮ್ಮ ದೇಶದ ರಾಷ್ಟ್ರೀಯ ಭಾಷೆಯನ್ನುಉ ಗೌರವಿಸಬೇಕು. ಹಿಂದಿ ಭಾಷೆ ನಮ್ಮ ದೇಶದ ಪರಂಪರೆಯನ್ನು ಹೊಂದಿದ್ದು, ನಾವು ನಮ್ಮ ತ್ರಿವರ್ಣವನ್ನು ಗೌರವಿಸಿರುವಂತೆಯೇ ನಮ್ಮ ದೇಶದ ರಾಷ್ಟ್ರೀಯ ಭಾಷೆಯನ್ನು ಗೌರವಿಸಬೇಕು ಎಂದರು.

ವೇದಿಕೆಯಲ್ಲಿ ಹಿಂದಿಸಭಾದ ಸಂಯೋಜಕರಾದ ಡಾ| ಆಶಾ ಸಾವಿತ್ರಿ ಹಾಗೂ ಸತೀಶ್ ಎಂ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರವೇರಿತು. ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಸಹಾನಾ ಮತ್ತು ಬಳಗ ಪ್ರಾರ್ಥಿಸಿದರು. ನಿಸರ್ಗ ಸ್ವಾಗತಿಸಿ ಕಿರಣ್ ವಂದಿಸಿದರು. ಧ್ಯಾನ್ , ಮಹಮ್ಮದ್ ಅಕ್ಮಲ್ ಕಾರ್ಯಕ್ರಮ ನಿರುಪಿಸಿದರು.