Free Online Classes Started for the Enrolled I PUC Students by SPPUC College.

ಕೋರೋನ ವೈರಸ್ ಮಹಾಮಾರಿ ದೇಶದ ಶೈಕ್ಷಣಿಕ ವ್ಯವಸ್ಥೆ ಯನ್ನು ಅಲ್ಲೋಲ ಕಲ್ಲೋಲವಾಗಿಸಿರುವ ಈ ಕಠಿಣ ಸಂದರ್ಭದಲ್ಲಿ, ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ 2 ತಿಂಗಳುಗಳಿಂದ ವಿದ್ಯಾರ್ಥಿಗಳ ಜೊತೆಗೆ ಸತತ ಸಂಪರ್ಕದಲ್ಲಿದ್ದು ವ್ಯವಸ್ಥಿತವಾಗಿ ಆನ್ಲೈನ್ ತರಗತಿಗಳನ್ನು ನಡೆಸುವ ಮೂಲಕ ಸಂಸ್ಥೆಯ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವನ್ನು ಒದಗಿಸಿಕೊಟ್ಟಿದ್ದು, ಇದೇ ಜೂಲೈ 15 ನೇ ತಾರೀಕಿನಿಂದ 10ನೇ ತರಗತಿಯ ಪರೀಕ್ಷೆಗಳನ್ನು ಮುಗಿಸಿ ಫಲಿತಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ಪಿ. ಯು. ಸಿ. ತರಗತಿಗಳನ್ನು ಉಚಿತವಾಗಿ ಆರಂಭಿಸುತ್ತಿದೆ. ಎಸ್. ಎಸ್. ಎಲ್. ಸಿ. ಪರೀಕ್ಷೆಗಳನ್ನು ಮುಗಿಸಿ ಪಿ ಯು ಸಿ ವಿದ್ಯಾಭ್ಯಾಸಕ್ಕೆ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶಾತಿಯನ್ನು ಈಗಾಗಲೇ ಪಡೆದಿರುವ ವಿದ್ಯಾರ್ಥಿಗಳು ಹಾಗು ಮುಂದಿನ ದಿನಗಳಲ್ಲಿ ಪ್ರವೇಶಾತಿಯನ್ನು ಪಡೆಯಬಹುದಾದ ವಿದ್ಯಾರ್ಥಿಗಳು ಈ ವಿಶೇಷ ತರಗತಿಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ತರಗತಿಗಳನ್ನು ಸಂಸ್ಥೆಯ ನುರಿತ ಹಾಗು ಅನುಭವಿ ಉಪನ್ಯಾಸಕರು ನಡೆಸಿಕೊಡುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ತರಗತಿಗಳ ಸಂಯೋಜಕರಾದ ಶ್ರೀ ರೋಹಿತ್ ಕುಮಾರ್ ಟಿ. ಇವರನ್ನು ದೂರವಾಣಿ ಸಂಖ್ಯೆ 8904288297 ಅಥವಾ ಶ್ರೀ ಸಂಜಯ್ ಎಸ್. (9535551889) ಮತ್ತು ಶ್ರೀ ಗೋವಿಂದ ಪ್ರಕಾಶ್ (9591521890 )ಮೂಲಕ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಪುತ್ತೂರಿನನಲ್ಲಿ ಕಳೆದ 61 ವರ್ಷಗಳಿಂದ ಉತ್ತಮ ಗುಣಮಟ್ಟದ ವಿಧ್ಯಾಭ್ಯಾಸವನ್ನು ನೀಡಿ, ಹಲವಾರು ಪ್ರತಿಭೆಗಳ ಅನಾವರಣಕ್ಕೆ ಒತ್ತಾಸೆಯಾಗಿ ನಿಂತಿರುವ ಫಿಲೋಮಿನಾ ಪದವಿಪೂರ್ವ ಕಾಲೇಜು, ಕಳೆದ 2 ತಿಂಗಳುಗಳಿಂದ ನಡೆಸಿಕೊಂಡು ಬಂದಿರುವ ಶೈಕ್ಷಣಿಕ ಚಟುವಟಿಕೆಗಳು ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿವೆ. ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಬಾರದೆಂದು ಯೋಚಿಸಿದ ಕಾಲೇಜಿನ ಪ್ರಾಂಶುಪಾಲರಾದ ರೇ ! ಫಾ ! ವಿಜಯ್ ಲೋಬೊ ಇವರು, ಸಂಸ್ಥೆಯ ಎಲ್ಲಾ ಉಪನ್ಯಾಸಕರುಗಳಿಗೆ ಆನ್ಲೈನ್ ಶಿಕ್ಷಣದ ತರಬೇತಿಯನ್ನು ನುರಿತ ತರಬೇತುದಾರರಿಂದ ನೀಡಿಸಿ, ತರಗತಿಗಳನ್ನು ಆರಂಭಿಸಿರುವುದನ್ನು ಪೋಷಕರು ಶ್ಲಾಘಿಸಿದ್ದಾರೆ. ಇಂದು ಸಂಸ್ಥೆಯು ನಿರ್ಮಿಸಿರುವ ಆನ್ಲೈನ್ ಶೈಕ್ಷಣಿಕ ಪರಿಸರವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದ ತಮ್ಮನ್ನು ಅಳವಡಿಸಿಕೊಂಡಿರುವುದು ಕಾಲೇಜಿನ ಪ್ರಯತ್ನಕ್ಕೆ ಸಿಕ್ಕಿರುವ ಯಶಸ್ಸಾಗಿರುತ್ತದೆ. ಇದೇನಿಟ್ಟಿನಲ್ಲಿ ಮುಂದುವರಿದು ಜೂಲೈ 15ನೇ ತಾರೀಕಿನಿಂದ ಆರಂಭವಾಗುವ ಪ್ರಥಮ ಪಿ. ಯು. ಸಿ. ಉಚಿತ ತರಗತಿಗಳ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಮುಂದಿನ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿಸುವತ್ತ ಹೆಜ್ಜೆಯಿಡಬೇಕೆಂದು ಕಾಲೇಜಿನ ಪ್ರಕಟಣೆ ತಿಳಿಸಿರುತ್ತದೆ.