3ನೇ ರ‍್ಯಾಂಕ್‌ ಪಡೆದ ಸ್ವಸ್ತಿಕ್ ಪಿ. ಇವರಿಗೆ ಕಾಲೇಜ್ ವತಿಯಿಂದ ಅಭಿನಂದನೆ

ಪದವಿ ಪೂರ್ವ ಶಿಕ್ಶಣ ಇಲಾಖೆ ನಡೆಸಿದ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ರಾಜ್ಯದಲ್ಲಿ 3 ನೇ ರ‍್ಯಾಂಕ್‌ (594/600) ಪಡೆದು ಕಾಲೇಜ್ ಟಾಪರ್ ಆದ ಸ್ವಸ್ತಿಕ್ ಪಿ. ಇವರನ್ನು ಸಂತ ಫಿಲೋಮಿನಾ ಕಾಲೇಜು ವತಿಯಿಂದ ಪ್ರಾಂಶುಪಾಲರಾದ ವಂ. ವಿಜಯ್ ಲೋಬೊರವರು ಹೂಗುಚ್ಚ ನೀಡಿ ಅಭಿನಂದಿಸಿದರು. ಸ್ವಸ್ತಿಕರವರು ಸಂಸ್ಕ್ರತ, ಅರ್ಥಶಾಸ್ತ್ರ, ಅಕೌಂಟ್ಸ್ ಮತ್ತು ಸ್ಟಾಟಿಸ್ಟಿಕ್ಸ್‍ನಲ್ಲಿ ತಲಾ 100 ಅಂಕ ಹಾಗೂ ಇಂಗ್ಲೀಷ್‍ನಲ್ಲಿ 95 ಮತ್ತು ವ್ಯವಹಾರ ಅಧ್ಯಯನದಲ್ಲಿ99 ಅಂಕಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.

ಕಾಲೇಜ್‍ನಲ್ಲಿ ಎರಡನೇ ಟಾಪರ್ (589/600) ಆದ ಸ್ವಸ್ತಿಕ್‍ನ ಅವಳಿ ತಂಗಿ ಸಾತ್ವಿಕ ಪಿ. ಇವರನ್ನೂ ಅಭಿನಂದಿಸಲಾಯಿತು. ಇವರು ಕೂಡ ಸಂಸ್ಕ್ರತ, , ಅಕೌಂಟ್ಸ್ ಮತ್ತು ಸ್ಟಾಟಿಸ್ಟಿಕ್ಸ್‍ನಲ್ಲಿ ತಲಾ 100 ಅಂಕ ಹಾಗೂ ಇಂಗ್ಲೀಷ್‍ನಲ್ಲಿ 95, ಅರ್ಥಶಾಸ್ತ್ರದಲ್ಲಿ 96 ಮತ್ತು ವ್ಯವಹಾರ ಅಧ್ಯಯನದಲ್ಲಿ98 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಸ್ವಸ್ಥಿಕ್ ಮತ್ತು ಸಾತ್ವಿಕ ರವರ ತಂದೆ ಶ್ರೀ ಕೃಷ್ಣಮೂರ್ತಿ ಮಾಡಾವು ಮತ್ತು ತಾಯಿ ವಿದ್ಯಾ ರವರು ಹಾಗೂ ಕಾಲೇಜಿನ ಉಪನ್ಯಾಸಕರಾದ ಲವೀನ ಸಾಂತ್ಮಾಯೋರ್, ಸಂಜಯ್, ರಾಹುಲ್, ಗೀತಾ ಕುಮಾರಿ ಉಪಸ್ಥಿತರಿದ್ದರು.