ಇ-ವೇಸ್ಟ್ ಫ್ರೀ ಕ್ಯಾಂಪಸ್ ಪ್ರಶಸ್ತಿ

ಸಂತ ಫಿಲೋಮಿನಾ ರೋವರ‍್ಸ್ ಮತ್ತು ರೇಂಜರ‍್ಸ್ ಘಟಕದ ಆಶ್ರಯದಲ್ಲಿ ಮಂಗಳೂರು ಸ್ಕೌಟ್ ಮತ್ತು ಗೈಡ್ಸ್ ಫೆಲೋಶಿಪ್ ಘಟಕದ ಉದ್ಘಾಟನೆ ಮತ್ತು ಇ-ವೇಸ್ಟ್ ನ ಬಗ್ಗೆ ಜಾಗೃತಿ ಕಾರ್ಯಕ್ರಮ ದಿನಾಂಕ 30-06-2018ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಇಂಡಿಯನ್ ಸ್ಕೌಟ್ ಗೈಡ್ಸ್ ಫೆಲೋಶಿಪ್‌ನ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳಾದ ಎಂ.ಎ.ಕೆ. ಮೆಕ್ಕಿಯವರು ಮಾತನಾಡಿ ಶಿಕ್ಷಣವು ಇ-ವೇಸ್ಟ್ ನ ಸಮಸ್ಯೆಯನ್ನು ಪರಿಹರಿಸುವಲ್ಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಜ್ಞಾನ ಬೆಳೆದಂತೆ ಮನುಷ್ಯನ ಹವ್ಯಾಸಗಳು ಬದಲಾಗುತ್ತಾ ಹೋಗುತ್ತದೆ. ಪರಿಸರದಲ್ಲಿರುವ ಹೆಚ್ಚಿನ ವಸ್ತುಗಳನ್ನು ಮರುಬಳಕೆ ಮಾಡಲು ಸಾಧ್ಯವಿದೆ. ಪ್ರಕೃತಿಗೆ ಹಾನಿಯಾಗದಂತೆ ಇ-ವೇಸ್ಟ್(ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು) ಯಾವ ರೀತಿ ವಿಲೇವಾರಿ ಮಾಡಬೇಕೆಂಬ ಮಾಹಿತಿಯನ್ನು ನೀಡಿದರು.ಇ-ವೇಸ್ಟ್ ನ್ನು ಮರುಬಳಕೆ ಮಾಡುವ ವಿಧಾನದ ಬಗ್ಗೆ ವಿವರಿಸಿದರು.

ಗೌರವ ಅತಿಥಿಗಳಾದ ಇಂಡಿಯನ್ ಸೌಟ್ ಗೈಡ್ ಫೆಲೋಶಿಪ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಮುನೀರ ಬಿ. ಮಿಸ್ಟ್ರಿ ಹಾಗೂ ಸ್ಕೌಟ್ ಗೈಡ್ ಫೆಲೋಶಿಪ್ ಘಟಕ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅನು ತಿಮ್ಮಪ್ಪ ಇವರು ಇಂಡಿಯನ್ ಸ್ಕೌಟ್ ಮತ್ತು ಗೈಡ್ ಫೆಲೋಶಿಪ್ ನ ಪಾತ್ರ, ಕಾರ್ಯ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ|ಫಾ| ವಿಜಯ್ ಲೋಬೊ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ರೋವರ್ ಸ್ಕೌಟ್‌ನ ಮುಖ್ಯಸ್ಥರಾದ ಹರ್ಷದ ಇಸ್ಮಾಯಿಲ್ ಉಪಸ್ಥಿತರಿದ್ದರು.

ರೇಂಜರ್ ರಕ್ಷಾ ಅತಿಥಿಗಳನ್ನು ಸ್ವಾಗತಿಸಿ, ನಾಗರಾಜ್ ವಂದಿಸಿದರು. ಅಮನ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮತ್ತು ಯುವ ಶಕ್ತಿ ಅಭಿವೃದ್ಧಿಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿರುವ ಮಾಡಿರುವ ಕಾಲೇಜಿನ ರೋವರ್ ಸ್ಕೌಟ್ ನ ರಾಷ್ಟೀಯ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜನ್ನು ಇ-ವೇಸ್ಟ್ ಫ್ರೀ ಕ್ಯಾಂಪಸ್ ಎಂದು ಘೋಷಿಸಿ ಪ್ರಮಾಣಪತ್ರವನ್ನು ನೀಡಲಾಯಿತು.