ಸಾಂಸ್ಕೃತಿಕ ಸಂಭ್ರಮ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಶ್ರೀ ಮಹಿಷ ಮರ್ಧಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಪುತ್ತೂರು ಇದರ ಆಶ್ರಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ನಡೆದ ಪಿಯುಸಿ ಮತ್ತು ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಭ್ರಮ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತಂಡವು ದ್ವಿತೀಯ ಬಹುಮಾನದೊಂದಿಗೆ ನಗದು ಹಾಗೂ ಪ್ರಶಸ್ತಿ ಫಲಕವನ್ನು ಪಡೆದುಕೊಂಡಿದ್ದಾರೆ. ತಂಡದಲ್ಲಿ ವಿದ್ಯಾರ್ಥಿಗಳಾದ ದೀಕ್ಷಾ ಪಾರ್ವತಿ, ಚಂದ್ರಾಕ್ಷ, ಜೀವನ್, ಮಂಜುನಾಥ್, ಜಯಪ್ರಕಾಶ್, ಚೆನ್ನಬಸಮ್ಮ, ಶ್ರೀದೇವಿ, ಮಹಾಲಸ, ಧನ್ಯಶ್ರೀ, ಆಶ್ರೀತಾ, ವೈಭವಿ, ವೈಷ್ಣವಿ, ಲಹರಿ, ಹರ್ಷಿತಾ, ಸುಚಿತ್ರಾ, ಅಶ್ವಿತಾ, ಅಭಿಜ್ಞಾ, ವೈಷ್ಣವಿ ಹಾಗೂ ದೀಕ್ಷಾ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲರಾದ ವಂ| ವಿಜಯ್ ಲೋಬೊರವರ ಮಾರ್ಗದರ್ಶನದಲ್ಲಿ ಸಂಯೋಜಕಿ ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಸುಮನಾ ಕೆ. ಇವರು ವಿದ್ಯಾರ್ಥಿಗಳಿಗೆ ನಿರ್ದೇಶನ ಮಾಡಿರುತ್ತಾರೆ.