ಸ್ವಸ್ತಿಕ್ ಪಿ ಮತ್ತು ಸಾತ್ವಿಕಾ ಪಿ.ರವರು ಕಾಮನ್ ಫ್ರೊಫಿಸಿಯನ್ಸಿ ಟೆಸ್ಟ್‍ನಲ್ಲಿ ತೇರ್ಗಡೆ

ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟೆಂಟ್ ಆಫ್ ಇಂಡಿಯಾ(ಐಸಿಎಐ)2019 ಜೂನ್ ತಿಂಗಳಲ್ಲಿ ನಡೆಸಿದ ಕಾಮನ್ ಫ್ರೊಫಿಸಿಯನ್ಸಿ ಟೆಸ್ಟ್‍ನಲ್ಲಿ ಇಲ್ಲಿನ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿಗಳಾದ ಅವಳಿ ಸಹೋದರ-ಸಹೋದರಿ ಆಗಿರುವ ಸ್ವಸ್ತಿಕ್ ಪಿ ಮತ್ತು ಸಾತ್ವಿಕಾ ಪಿ.ರವರು ತೇರ್ಗಡೆಗೊಂಡಿದ್ದಾರೆ.

ಸ್ವಸ್ತಿಕ್ ಪಿ.ರವರು ಫಂಡಮೆಂಟಲ್ಸ್ ಆಫ್ ಎಕೌಂಟಿಂಗ್‍ನಲ್ಲಿ 60ರಲ್ಲಿ 36, ಮರ್ಕಂಟೈಲ್ ಲಾದಲ್ಲಿ 40ರಲ್ಲಿ 24, ಜನರಲ್ ಎಕನಾಮಿಕ್ಸ್‍ನಲ್ಲಿ 50ರಲ್ಲಿ 35 ಹಾಗೂ ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್ನಲ್ಲಿ 50ರಲ್ಲಿ 28 ಹೀಗೆ ಒಟ್ಟು 200ರಲ್ಲಿ 123 ಅಂಕಗಳನ್ನು, ಸ್ವಸ್ತಿಕ್‍ರವರ ಅವಳಿ ಸಹೋದರಿ ಸಾತ್ವಿಕಾ ಪಿ.ರವರು ಫಂಡಮೆಂಟಲ್ಸ್ ಆಫ್ ಎಕೌಂಟಿಂಗ್‍ನಲ್ಲಿ 60ರಲ್ಲಿ 33, ಮರ್ಕಂಟೈಲ್ ಲಾದಲ್ಲಿ 40ರಲ್ಲಿ 18, ಜನರಲ್ ಎಕನಾಮಿಕ್ಸ್‍ನಲ್ಲಿ 50ರಲ್ಲಿ 39 ಹಾಗೂ ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್ನಲ್ಲಿ 50ರಲ್ಲಿ 26 ಹೀಗೆ ಒಟ್ಟು 200ರಲ್ಲಿ 116 ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.

2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ವಸ್ತಿಕ್ ಪಿ.ರವರು 594/600 ಅಂಕ ಗಳಿಸಿ ರಾಜ್ಯದಲ್ಲಿ ತೃತೀಯ ರ್ಯಾಂಕ್‍ನ್ನು ಗಳಿಸಿದ್ದರು. ಸಾತ್ವಿಕಾ ಪಿ.ರವರು 589/600 ಅಂಕ ಪಡೆದು ರಾಜ್ಯದಲ್ಲಿ ಎಂಟನೇ ರ್ಯಾಂಕ್ ಗಳಿಸಿದ್ದರು. ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿಯೇ ನಡೆದಂತಹ ಸಿಪಿಟಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಇವರೀರ್ವರು ಮಾಡಾವು ನಿವಾಸಿ ಕೃಷ್ಣಮೂರ್ತಿ ಪಿ ಹಾಗೂ ವಿದ್ಯಾ ಪಿ ದಂಪತಿ ಮಕ್ಕಳಾಗಿರುತ್ತಾರೆ. ಫಿಲೋಮಿನಾ ಕಾಲೇಜ್‍ನ ಸಂಚಾಲಕರು, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವೃಂದದವರು ಸ್ವಸ್ತಿಕ್ ಹಾಗೂ ಸಾತ್ವಿಕಾರವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ ಮಾತ್ರವಲ್ಲದೆ ಕಾಲೇಜ್‍ನಲ್ಲಿ ಈಗಾಗಲೇ ಸಿಪಿಟಿ ತರಗತಿಗಳು ಆರಂಭವಾಗಿದೆ ಎಂದು ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕ್ಸ್
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಚಾರ್ಟಡ್ ಎಕೌಂಟೆಂಟ್ ಹುದ್ದೆಗೆ ಬಹಳ ಸ್ಕೋಪ್ ಇದೆ. ಚಾರ್ಟರ್ಡ್ ಎಕೌಂಟೆಂಟ್ ಆಗಬೇಕೆನ್ನುವುದು ನಮಗೀರ್ವರಿಗೂ ಚಿಕ್ಕಂದಿನಿಂದಲೂ ನಮ್ಮ ಕನಸಾಗಿತ್ತು. ನಮ್ಮ ಹೆತ್ತವರು ನನ್ನ ಕನಸಿಗೆ ಪ್ರೋತ್ಸಾಹ ನೀಡಿದ್ದು ಅಲ್ಲದೆ ಪ್ರತಿಷ್ಠಿತ ಸಂಸ್ಥೆಯಾಗಿರುವ ಫಿಲೋಮಿನಾ ಪಿಯು ಕಾಲೇಜ್‍ಗೆ ದಾಖಲಾತಿ ಮಾಡಿದ್ದರು. ಪ್ರಸ್ತುತ ನಾವು ಬೆಂಗಳೂರಿನ ಕ್ಯಾಪ್ಸ್(ಅಂPS) ಕಾಲೇಜ್‍ನಲ್ಲಿ ಸಿಎ ವ್ಯಾಸಂಗವನ್ನು ಮಾಡುತ್ತಿದ್ದೇವೆ. ಫಿಲೋಮಿನಾ ಸಂಸ್ಥೆಯಲ್ಲಿನ ಪ್ರಾಂಶುಪಾಲರಾಗಲಿ, ಅಧ್ಯಾಪಕ ವೃಂದದವರಾಗಲಿ ನನ್ನ ಕಲಿಕೆಗೆ ಬಹಳಷ್ಟು ಸ್ಫೂರ್ತಿಯನ್ನು ತುಂಬಿದ್ದಾರೆ ಅಲ್ಲದೆ ಸಿಪಿಟಿ ಕೋರ್ಸ್‍ಗೆ ಬೇಕಾದ ತರಬೇತಿಯನ್ನು ಸಹ ನೀಡಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ.
-ಸ್ವಸ್ತಿಕ್ ಪಿ, ಸಾತ್ವಿಕಾ ಪಿ, ಫಿಲೋಮಿನಾ ವಿದ್ಯಾರ್ಥಿ