ಚೆಸ್ ಸ್ಪರ್ಧೆ

ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜ್‌ನ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಶಾಂತ್ ನಾಕ್‌ರವರು ಇದೇ ತಿಂಗಳಿನಲ್ಲಿ ಯಾದಗರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಒಟ್ಟು 7 ಸುತ್ತಿನ ಈ ಪಂದ್ಯಾಟದಲ್ಲಿ ೬ ಅಂಕಗಳನ್ನು ಪಡೆದ ಪ್ರಶಾಂತ್‌ರವರು ಅರ್ಹವಾಗಿಯೇ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಾಂತ್ ನಾಕ್‌ರವರು ಈ ಹಿಂದೆ 1500 ರೇಟೆಡ್ ಒಳಗಿನವರ ವಿಭಾಗದ ಫಿಡೆ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಟ ರ‍್ಯಾಂಕಿಂಗ್‌ನೊಂದಿಗೆ ಅಂತರ್ರಾಷ್ಟ್ರೀಯ ಮಟ್ಟದ ಸಾಧನೆಯನ್ನು ಕೂಡ ಮಾಡಿರುತ್ತಾರೆ. ಇವರು ಪುತ್ತೂರಿನ ಜೀನಿಯಸ್ ಚೆಸ್ ಸ್ಕೂಲ್ ಹಾಗೂ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ತರಬೇತಿಯನ್ನು ಪಡೆದಿದ್ದು ಇವರು ಕುಂಬ್ರ ನಿವಾಸಿ ಜಗದೀಶ್ ನಾಕ್ ಹಾಗೂ ಉಮಾ ಜಿ.ನಾಕ್ ದಂಪತಿ ಪುತ್ರರಾಗಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.