ಸಿ.ಎ. ಫೌಂಡೇಶನ್ ಟೆಸ್ಟ್ ನಲ್ಲಿ ಫಿಲೋಮಿನಾದ ಎರಡು ವಿದ್ಯಾರ್ಥಿಗಳು ತೇರ್ಗಡೆ

 

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICAI)2020 ಇವರು ನವೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ.ಫೌಂಡೇಶನ್ ಟೆಸ್ಟ್ ನಲ್ಲಿ ಈ ಬಾರಿ ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ಎರಡು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶಾಂತಿಗೋಡು ಗ್ರಾಮದ ನಿವಾಸಿ ಜಗನ್ನಾಥ್ .ಎಸ್ ಹಾಗೂ ಪ್ರಭಾವತಿ ಜೆ.ಶೆಟ್ಟಿ ರವರ ಪುತ್ರ ಧೀಮಂತ್ ಶೆಟ್ಟಿ (217/400), ಹಾಗೂ ಅಳಿಕೆ ನಿವಾಸಿ ರವಿಚಂದ್ರ ದಾಸ್ ರೈ ಕೆ.ಬಿ. ಹಾಗೂ ಉಮಾವತಿ.ಯುರವರ ಪುತ್ರಿ ಶಾರ್ವರಿ ರೈ.ಕೆ.ಬಿ (246/400) ಇವರು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರು ಕಳೆದ ಪಿ.ಯು.ಸಿ. ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕಗಳನ್ನು ಪಡೆಯುವ ಮೂಲಕ ಉತ್ತೀರ್ಣರಾಗಿದ್ದರು. ಇವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.
ಕಳೆದ ಏಳು ವರ್ಷಗಳಿಂದ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.ಪ್ರತಿ ಶನಿವಾರ ಮತ್ತು ಭಾನುವಾರ ಸಿ.ಎ. ಫೌಂಡೇಶನ್ ಟೆಸ್ಟ್ ನ ಕುರಿತಾದ ತರಬೇತಿಯನ್ನು ನುರಿತ ಹಾಗೂ ಅನುಭವಿ ಉಪನ್ಯಾಸಕರಿಂದ ನೀಡಲಾಗುತ್ತಿದೆ.ಕಲಿಕೆಗೆ ಪೂರಕವಾಗಿರುವ ಮತ್ತು ವ್ಯಾಸಂಗಕ್ಕೆ ಉತ್ತಮ ವಾತಾವರಣ ಹೊಂದಿರುವ ಈ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಇಚ್ಚಿಸುವವರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.