ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟ

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮೂದಬಿದ್ರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿಗೆ ಒಟ್ಟು 11 ಪದಕಗಳು ಲಭಿಸಿದ್ದು ಬಾಲಕರ ವಿಭಾಗದಲ್ಲಿ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡರೆ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪದೆದುಕೊಂಡಿರುತ್ತಾರೆ, ಈ ಕೂಟದಲ್ಲಿ ತ್ರಿವಿಧ ಜಿಗಿತ ಮತ್ತು ಉದ್ದ ಜಿಗಿತದಲಿಲ್ ಚಿನ್ನದ ಪದಕಗಳನ್ನು ಕೊರಳಿಗೇರಿಸಿದ ಫಿಲೋಮಿನಾದ ಪ್ರೀತಮ್ ರೈ ಅವರಿಗೆ ವೈಯಕ್ತಿಕ ಪ್ರಶಸ್ತಿ ಲಭಿಸಿದೆ.

ಮೂವರು ರಾಜ್ಯ ಮಟ್ಟಕ್ಕೆ ಆಯ್ಕೆ
ಇದೇ ತಿಂಗಳಲ್ಲ್ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಗೆ ಸಂತ ಫಿಲೋಮಿನಾದ ಮೂವರು ವಿದ್ಯಾರ್ಥಿಗಳು ಅಯ್ಕೆಯಾಗಿರುತ್ತಾರೆ. ದ್ವಿತೀಯ ವಿಜ್ಞಾನ ವಿಭಾಗ್ದ ಪ್ರೀತಂ ರೈ ಚಿನ್ನದ ಪದಕ, ಉದ್ದ ಜಿಗಿತದಲ್ಲಿ ಚಿನದ ಪದಕವನ್ನು, ದ್ವಿತೀಯ ಕಲಾ ವಿಭಾಗದ ಭವಿತ್ ಕುಮಾರ್ ಫೆÇೀಲ್ ವಾಲ್ಟ್ ನಲ್ಲಿ ಚಿನ್ನದ ಪದಕ, ಎತ್ತರ ಜಿಗಿತದಲ್ಲಿಕಂಚಿನ ಪದಕ ಹಾಗೂ ಪ್ರಥಮ ವಿಜ್ಞಾನ ವಿಭಾಗದ ರಕ್ಷಾ ಅಂಚನ್ ಇವರು 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳೀ ಪದಕ ಪಡೆದು ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುತ್ತಾರೆ

ಪದಕ ಪಡೆದ ಇತರ ವಿದ್ಯಾರ್ಥಿಗಳು
ದ್ವಿತೀಯ ವಾಣಿಯ ವಿಭಾಗದ ಮಹಮ್ಮದ್ ಉನೈಸ್ – 1ಕಂಚು, 1 ಬೆಳ್ಳಿ ಪದಕ, ದ್ವಿತೀಯ ವಾಣೀಜ್ಯ ವಿಭಾಗದ ರಿಕ್ಸನ್ ಮಾರ್ಟಿಸ್ 1 ಬೆಳ್ಳಿ ಪದಕ, ದ್ವಿತೀಯ ವಾಣೀಜ್ಯ ವಿಭಾಗದ ಎಲ್ಸನ್ ಪಿರೇರಾ – 1 ಬೆಳ್ಳಿ, ಪ್ರಥಮ್ ವಿಜ್ಞಾನ ವಿಭಾಗದ ವಿನೀತ್ ಜಿ ಆರ್ – 1 ಕಂಚು, ಪ್ರಥಮ ವಿಜ್ಞಾನ ಬಿಭಾಗದ ನೇಹಾ – 1 ಕಂಚು, ಪ್ರಥಮ ವಾಣಿಜ್ಯ ವಿಭಾಗದ ಹರ್ಷಿತಾ ಎ 2 ಕಂಚಿನ ಪದಕವನ್ನು ಪಡೆದುಕೊಡಿರುತ್ತಾರೆ

ಇವರಿಗೆ ರಾಷ್ಟ್ರೀಯ ಪೋಲ್ ವಾಲ್ಟ್ ಕ್ರೀಡಾಪಟು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಜ್ಜನ್ ಕುಮಾರ್ ಇವರು ಪೆÇೀಲ್ ವಾಲ್ಟ್ ತರಭೇತಿಯನ್ನು ನೀಡುತ್ತಿದ್ಡಾರೆ.