ದ್ವಿತೀಯ ಪಿಯುಸಿ: ಕೋವಿಡ್ ನಿಯಮದಂತೆ ಭೌತಿಕ ತರಗತಿಗಳಿಗೆ ಹಾಜರಾದ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿಗಳು

ಪುತ್ತೂರು: ಕರ್ನಾಟಕ ಸರಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದನ್ವಯ ಜನವರಿ 1ರಿಂದ ದ್ವಿತೀಯ ಪಿಯುಸಿಗೆ ಭೌತಿಕವಾಗಿ ತರಗತಿಗಳು ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸರಕಾರ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ(SಔP)ದನ್ವಯ ಹಾಜರಾಗಿದ್ದಾರೆ.
ಕಾಲೇಜಿನಲ್ಲಿ
ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರ ನಿರ್ದೇಶನದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗ ಕಾಲೇಜಿನ ಹೊರಾಂಗಣದ ನೆಲದ ಮೇಲೆ ಆರು ಅಡಿಗಳ ಅಂತರದಲ್ಲಿ ಹಾಕಲಾದ ಗುರುತಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸರತಿ ಸಾಲಿನಲ್ಲಿ ಆಗಮಿಸುವಂತೆ ತರಗತಿಗಳನ್ನು ಪ್ರವೇಶಿಸುವಂತೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಆಡಳಿತ ಸಿಬ್ಬಂದಿ ಸಾಮಾಜಿಕ ಅಂತರದೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ವಿದ್ಯಾರ್ಥಿಗಳಿಗೆ ಸೂಚನೆವೀಯುತ್ತಿದ್ದರು.
ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ವಿದ್ಯಾರ್ಥಿಗಳು ಹೆತ್ತವರ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರಬೇಕಾಗಿದ್ಧು, ಇದರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಇಲ್ಲವೆಂಬುದನ್ನು ಹೆತ್ತವರು ದೃಢೀಕರಿಸಬೇಕಾಗಿದೆ ಎಂದು ಸರಕಾರ ಆಯಾ ಕಾಲೇಜುಗಳಿಗೆ ಸೂಚನೆ ನೀಡಿರುತ್ತಾರೆ. ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಕಾಲೇಜು ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡಿದ್ದು, ಕಾಲೇಜಿನ ಬೋಧನಾ ಕೊಠಡಿ, ಪ್ರಯೋಗಾಲಯಗಳು, ಪುರುಷರ ಹಾಗೂ ಹೆಣ್ಮಕ್ಕಳ ವಸತಿನಿಲಯ ಹಾಗೂ ಇನ್ನಿತರ ಸ್ಥಳಗಳನ್ನು 1% ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣದಿಂದ ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಕಾಲೇಜಿನ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿದ್ದು, ಸೋಪ್ ಮತ್ತು ಹ್ಯಾಂಡ್ ವಾಷ್‍ನ ವ್ಯವಸ್ಥೆಯನ್ನು ಮಾಡಲಾಗಿದ್ದು, ತರಗತಿಗಳಿಗೆ ಹಾಜರಾಗಲು ಆಗಮಿಸುವ ವಿದ್ಯಾರ್ಥಿಗಳು ಗುಂಪು ಸೇರದಂತೆ ಜಾಗರೂಕತೆ ವಹಿಸಲು ಹಾಗೂ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ವಿಶೇಷ ನಿಗಾ ವಹಿಸಲು ಹಿರಿಯ ಉಪನ್ಯಾಸಕರನ್ನೊಳಗೊಂಡ ಕಾರ್ಯಪಡೆಯನ್ನು ಕೂಡ ರಚಿಸಲಾಗಿತ್ತು.
ಬಾಕ್ಸ್
ಸುಮಾರು ಹತ್ತು ತಿಂಗಳ ಬಳಿಕ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಸರಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಈ ನಿಟ್ಟಿನಲ್ಲಿ ತರಗತಿಗಳನ್ನು ಹಾಗೂ ಕ್ಯಾಂಪಸ್ಸನ್ನು ಸರಕಾರದ ಕಡ್ಡಾಯ ಕೋವಿಡ್ ನಿಯಮದಂತೆ ಸಜ್ಜುಗೊಳಿಸಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಈ ಭೌತಿಕ ತರಗತಿಗಳಿಗೆ ಹಾಜರಾಗಿರುವುದು ಖುಶಿ ತಂದಿದೆ. ಕೋವಿಡ್ ಸಮಯದಲ್ಲಿ ಕಾಲೇಜು ಆನ್‍ಲೈನ್ ತರಗತಿಗಳನ್ನು ಪರಿಣಾಮಕಾರಿಯಾಗಿ ನಡೆಸಿರುವುದು ಮತ್ತು ಹೆತ್ತವರಿಂದ ಪ್ರೋತ್ಸಾಹದಾಯಕ ಮಾತುಗಳು ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಫಿಲೋಮಿನಾ ವಿದ್ಯಾಸಂಸ್ಥೆಯು ಬಹಳಷ್ಟು ಶ್ರಮಿಸುತ್ತಿದೆ.
ವಂ|ವಿಜಯ್ ಲೋಬೋ, ಪ್ರಾಂಶುಪಾಲರು
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು