ಸಂತ ಫಿಲೋಮಿನ ಪ. ಪೂ. ಕಾಲೇಜಿನ ನೀಲ್ ಮಸ್ಕರೇನ್ಹಸ್ ಗೆ ಆರ್ಕಿಟೆಕ್ಚರ್ ವಿಭಾಗದಲ್ಲಿ ೨೧೪ ನೇ ರ್ಯಾಂಕ್

ಪುತ್ತೂರು: ಆರ್ಕಿಟೆಕ್ಚರ್ ಎಂಜಿನಿಯರಿಂಗ್ ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದ ಫಲಿತಾಂಶದಲ್ಲಿ ಸಂತ ಫಿಲೊಮಿನಾ ಪದವಿ ಪೂರ್ವ ಕಾಲೇಜಿನ ನೀಲ್ ಮಸ್ಕರೇನ್ಹಸ್ ಗೆ ೨೧೪ ನೇ ರ್ಯಾಂಕ್ ಲಭಿಸಿದೆ. ಇತ್ತೀಚೆಗೆ ನಡೆದ ನಾಟಾ ಫಲಿತಾಂಶವನ್ನು ಪರಿಗಣಿಸಿ ಈ ರ್ಯಾಂಕ್ ನ್ನು ನೀಡಲಾಗಿದೆ. ಉತ್ತಮ ಕ್ರೀಡಾ ಪಟುವು ಆಗಿರುವ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಫರ್ದೆಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗಳಿಸಿದ್ದಾರೆ . ಇವರು ಸಂತ ಫಿಲೋಮಿನಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ಮತ್ತು ಮುಕ್ರುಂಪಾಡಿ ಸರಕಾರಿ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಪ್ರಮೀಳಾ ಜೆಸ್ಸಿ ಕ್ರಾಸ್ತ ದಂಪತಿಗಳ ಪುತ್ರ.